ಮಡಿಕೇರಿ, ಏ. 4: ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಪೊಲೀಸರು ಸೇರಿದಂತೆ ಹಲವಾರು ಸ್ವಯಂ ಸೇವಕ ಸಂಘಗಳೂ ಮುಂದೆ ಬಂದಿವೆ. ದಿನಸಿ ಸಾಮಗ್ರಿ, ಔಷಧಿಗಳನ್ನು ಖರೀದಿಸಲು ಜನರು ಮುಗಿಬೀಳದಂತೆ ನೋಡಿಕೊಳ್ಳುತ್ತಿವೆ. ಮೂರ್ನಾಡಿನ ಕಾಫಿ ಬೆಳೆಗಾರ ಅರುಣ್ ಅಪ್ಪಚ್ಚು ಕೂಡ ಈ ಸಂದರ್ಭ ಮೈಕ್, ಸ್ಪೀಕರ್ ಬಳಸಿ ಅಂತರ ಕಾಪಾಡಿಕೊಳ್ಳುವಂತೆ ಪ್ರತಿನಿತ್ಯ ಮನವಿ ಮಾಡುತ್ತಿದ್ದಾರೆ.