ಕೂಡಿಗೆ, ಏ.4: ಕೂಡಿಗೆ ಡೈರಿಯಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆಯ ಸಮಯ ಸೇರಿದಂತೆ ದಿನಕ್ಕೆ 50,000 ಲೀಟರ್ ಹಾಲು ಜಿಲ್ಲೆಯ ಗ್ರಾಹಕರ ಮನೆಗಳಿಗೆ ವಿವಿಧ ಹಾಲಿನ ಕೇಂದ್ರಗಳ ಮೂಲಕ ಮತ್ತು ಚಿಲ್ಲರೆ ವ್ಯಾಪಾರಿಗಳ ಮೂಲಕ ತಲಪುತಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಪರಿಣಾಮ ಕೇವಲ 35,000 ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದ್ದು, ಸಂಜೆ ವೇಳೆಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹಾಲನ್ನು ಸಂಗ್ರಹಿಸಲಾಗುತ್ತಿದೆ ಅದೇ ರೀತಿಯಲ್ಲಿ ಹಸುವಿನ ಆಹಾರವನ್ನು ರೈತರಿಗೆ ನೀಡಲಾಗುತ್ತದೆ ಎಂದು ಕೊಡಗು ಹಾಗೂ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಪರಿಣಾಮ ಜಿಲ್ಲಾಧಿಕಾರಿ ಆದೇಶದಂತೆ ಕೂಡಿಗೆ ಡೈರಿ ವತಿಯಿಂದ ವೀರಾಜಪೇಟೆ, ಮಡಿಕೇರಿ ಇಂದಿರಾ ಕ್ಯಾಂಟಿನ್‍ಗೆ ತಾಲೂಕಿಗೆ 60 ಲೀಟರ್ ಹಾಲನ್ನು ಉಚಿತವಾಗಿ ನೀಡಲಾಗುತ್ತದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀಡುವಂತೆ ಸೂಚನೆ ಬಂದರೆ ನೀಡಲು ಸಿದ್ದರಿದ್ದೇವೆ ಎಂದು ಡೈರಿಯ ವ್ಯವಸ್ಥಾಪಕ ನಂದೀಶ್ ತಿಳಿಸಿದ್ದಾರೆ.