ಕೂಡಿಗೆ, ಏ. 4: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳು ಅವಳಿ ಗ್ರಾಮ ಪಂಚಾಯಿತಿಗಳಾಗಿದ್ದು; ಈ ಎರಡು ಪಂಚಾಯತಿಯ ಸಿಬ್ಬಂದಿಗಳು ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿರುವುದು ಕಂಡುಬರುತ್ತದೆ. ಕೂಡಿಗೆ ಗ್ರಾಮ ಪಂಚಾಯಿತಿಯು ಹಾರಂಗಿ ನದಿಯ ಸೇತುವೆ ಒಂದು ಭಾಗವಾದರೆ ಇನ್ನೊಂದು ಕಡೆ ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಸೇರಿದ ಭಾಗವಾಗಿದೆ. ಈ ಸೇತುವೆಯು ಹಾಸನ ಕುಶಾಲನಗರದ ಕೂಡಿಗೆ ಹೆದ್ದಾರಿಯ ಮುಖ್ಯ ರಸ್ತೆಯಾಗಿದೆ. ಎರಡು ಬದಿಗಳಲ್ಲಿ ಕಸದ ರಾಶಿ ಇರುವುದನ್ನು ಅರಿತ ಗ್ರಾಮ ಆಡಳಿತ ಮಂಡಳಿಯ ಸದಸ್ಯರು ಅಭಿವೃದ್ಧಿ ಅಧಿಕಾರಿ ಶುಚಿತ್ವಕ್ಕೆ ಕ್ರಮ ಕೈಗೊಂಡರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರಂಡಿಗಳಿಗೆ ಸಿಬ್ಬಂದಿಗಳಿಂದ ಔಷಧಿ ಸಿಂಪಡಿಸುವ ಕೆಲಸ ಮತ್ತು ರೋಗ ನಿರೋಧಕ ಶಕ್ತಿಯ ಪೌಡರ್ ಕ್ರಿಮಿಕೀಟಗಳು ಸಾಯುವಂತೆ ಡಿಡಿಟಿ ಪೌಡರ್ ಹಾಕುವಿಕೆ ಅಲ್ಲದೆ ಎಲ್ಲಾ ಗ್ರಾಮಗಳಿಗೆ ತೆರಳಿ ಶುದ್ಧ ನೀರಿನ ಬಳಕೆಯ ಬಗ್ಗೆ ಅರಿವು ಮತ್ತು ಹೊಸ ಜನ ಗ್ರಾಮಕ್ಕೆ ಬಂದರೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳುವಂತೆ ಹಾಗೂ ಕೊರೊನಾ ವೈರಸ್‍ನ ಬಗ್ಗೆ ತಿಳಿವಳಿಕೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಕೂಡಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಿಲ್ಪಾ ಕೂಡುಮಂಗಳೂರು ಅಭಿವೃದ್ಧಿ ಅಧಿಕಾರಿ ಆಯಿಷಾ ಸೇರಿದಂತೆ ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸಿದರು.