ಮಡಿಕೇರಿ, ಏ. 4: ಸಿದ್ದಾಪುರದ ವಿವಿಧ ಕಡೆ ಬಾಡಿಗೆ ಮನೆಗಳಲ್ಲಿ ವಾಸವಿರುವ ಪಶ್ಚಿಮ ಬಂಗಾಳದ 2, ಅಸ್ಸಾಂನ 31 ಜನ ಕಟ್ಟಡ, ನರ್ಸರಿ ಕೆಲಸಗಾರರಿಗೆ ಮತ್ತು ನಗರದ ರಾಣಿಪೇಟೆಯಲ್ಲಿರುವ ಜಾರ್ಖಂಡ್‍ನ 08, ಆಂಧ್ರ ಪ್ರದೇಶದ 1 ಮತ್ತು ಹೊಳೆನರಸಿಪುರದ 1 ಗಾರೆಕೆಲಸದ ಕಾರ್ಮಿಕರು ಸೇರಿದಂತೆ ಒಟ್ಟು 43 ಕಾರ್ಮಿಕರಿಗೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ವತಿಯಿಂದ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಮಡಿಕೇರಿ ತಾಲ್ಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ, ಸಿದ್ದಾಪುರ ಗ್ರಾಮ ಪಂಚಾಯತ್ ಪಿಡಿಓ ವಿಶ್ವನಾಥ ಕೆ.ಸಿ ಮತ್ತು ಸಿಬ್ಬಂದಿ ಸುರೇಶ ಇತರರು ಇದ್ದರು.