ಮಡಿಕೇರಿ, ಏ. 3: ಭಾರತೀಯ ಸೇನೆಯಲ್ಲಿ ಪ್ರಸ್ತುತ ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಕರ್ತವ್ಯದಲ್ಲಿರುವ ಕೊಡಗಿನ ಮೂವರು ಹಿರಿಯ ಸೇನಾಧಿಕಾರಿಗಳ ಪೈಕಿ ಒಬ್ಬರಾಗಿರುವ ಲೆಫ್ಟಿನೆಂಟ್ ಜನರಲ್ ಕೋದಂಡ ಪೂವಯ್ಯ ಕಾರ್ಯಪ್ಪ ಅವರು ಇದೀಗ ಉತ್ತರ ಪ್ರದೇಶದ ಮಥುರಾದಲ್ಲಿನ ಆರ್ಮಿ ಒನ್ ಕೋರ್‍ನ ಕಮಾಂಡ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈತನಕ ಮಿಲಿಟರಿ ಸೆಕ್ರೆÀಟರಿ ಟು ಪ್ರೆಸಿಡೆಂಟ್ ಆಫ್ ಇಂಡಿಯಾ ಆಗಿ ಕರ್ತವ್ಯದಲ್ಲಿದ್ದ ಲೆ.ಜ. ಕೋದಂಡ ಪಿ. ಕಾರ್ಯಪ್ಪ ಅವರು ಸೇನೆಯ ಮತ್ತೊಂದು ಪ್ರಮುಖ ವಿಭಾಗವಾಗಿರುವ ಮಥುರಾದಲ್ಲಿರುವ ಆರ್ಮಿ ಒನ್ ಕೋರ್ ಕಮಾಂಡ್ (ಜನರಲ್ ಆಫೀಸರ್ ಕಮಾಂಡಿಂಗ್ ಆಫ್ ದಿ ಎಲೈಟ್ ಒನ್ ಕಾಪ್ರ್ಸ್) ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಶಿಮ್ಲಾದ ಆರ್ಮಿ ಟ್ರೈನಿಂಗ್ ಕಮಾಂಡ್ ಆಗಿ ಲೆ.ಜ. ಪಟ್ಟಚೆರುವಂಡ ಸಿ. ತಿಮ್ಮಯ್ಯ ಹಾಗೂ ಮತ್ತೋರ್ವ ಲೆ. ಜ. ಆಗಿ ಚೆನ್ನೀರ ಬನ್ಸಿ ಪೊನ್ನಪ್ಪ ಪ್ರಸ್ತುತ ಕರ್ತವ್ಯದಲ್ಲಿದ್ದಾರೆ.