ಮಡಿಕೇರಿ, ಏ. 3: ಅಭ್ಯತ್‍ಮಂಗಲದ ಬಳಿಯ ಸಿಲ್ವರ್ ಎಸ್ಟೇಟ್‍ನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕಾರ್ಮಿಕರ ಕುಂದು ಕೊರತೆಯನ್ನು ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ ಅವರು ಆಲಿಸಿದರು. ಸುಮಾರು 16 ಮಂದಿ ಕೂಲಿ ಕಾರ್ಮಿಕರಿದ್ದು, ಇವರಿಗೆ ಆಹಾರ ಪೂರೈಸು ವುದರ ಜೊತೆಗೆ ಇತರ ಅಗತ್ಯ ಸಾಮಗ್ರಿ ಯನ್ನು ಪೂರೈಸು ವಂತೆ ಸಿಲ್ವರ್ ತೋಟದ ಮಾಲೀಕರಿಗೆ ಸೂಚಿಸಿದರು.