ಸುಂಟಿಕೊಪ್ಪ, ಏ. 3: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಉಪಯೋಗಕ್ಕಾಗಿ ಸರಕಾರ ಒದಗಿಸಿದ ಅಂಬ್ಯುಲೆನ್ಸ್ ವಾಹನವನ್ನು ಸೋಮವಾರಪಟೇಟೆ ಸರಕಾರಿ ಆಸ್ಪತ್ರೆಗೆ ಕಲ್ಪಿಸಲಾಗಿದ್ದು, ಸುಂಟಿಕೊಪ್ಪ ಹೋಬಳಿಯ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಹೋಬಳಿ ಮಟ್ಟದ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ನೂರಾರು ಮಂದಿ ಚಿಕಿತ್ಸೆಗೆ ಬರುತ್ತಿದ್ದಾರೆ. ರೋಗಿಗಳು ತೀರಾ ಅನಾರೋಗ್ಯಕ್ಕೀಡಾದ ಸಂದರ್ಭ ಬೇರೆಡೆಗೆ ಕರೆದೊಯ್ಯಲು ಈ ಅಂಬ್ಯುಲೆನ್ಸ್ ವಾಹನ ಸಹಕಾರಿಯಾಗಿದೆ. ಸ್ಥಳೀಯ ಜನರ ಅನಾನೂಕೂಲತೆಯನ್ನು ಮನಗಂಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತೆ ಇಲ್ಲಿಗೆ ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.