ಶನಿವಾರಸಂತೆ, ಏ. 3: ಶನಿವಾರಸಂತೆ ಗ್ರಾಮ ಪಂಚಾಯಿತಿಯವರು ಕೂಡಲೇ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಬಂದ ವರದಿಗೆ ಸಂಬಂಧಿಸಿದಂತೆ ಜಾಗೃತರಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಪಟ್ಟಣದ ಚರಂಡಿಗಳು, ಮಾರುಕಟ್ಟೆ, ರಾಮಮಂದಿರ, ಮಸೀದಿ, ಗ್ರಾಮ ಪಂಚಾಯಿತಿ ಶೌಚಾಲಯಗಳು, ಕಾವೇರಿ ರಸ್ತೆ, ಚರಂಡಿಗಳು ಹಾಗೂ ಬೈಪಾಸ್ ರಸ್ತೆ ಚರಂಡಿಗಳು, ಕೆ.ಆರ್.ಸಿ. ಸರ್ಕಲ್ ಹಾಗೂ ಇತರ ಕಡೆಗಳಿಗೆ ಪೌರಕಾರ್ಮಿಕರನ್ನು ಬಿಟ್ಟು ಔಷಧಿಯನ್ನು ಸ್ಪ್ರೇ ಮಾಡಿಸಿದರು. ಈ ಸಂದರ್ಭ ಲೆಕ್ಕ ಸಹಾಯಕ ವಸಂತ, ಧರ್ಮ, ಫೌಜಿಯಾ ಮತ್ತಿತರರು ಇದ್ದರು.