ಮಡಿಕೇರಿ, ಏ.3 : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಮುಂಜಾಗ ರೂಕತೆಯ ಕ್ರಮವಾಗಿ ವಿದ್ಯುಚ್ಛಕ್ತಿ ಬಿಲ್ಲುಗಳನ್ನು ಪಾವತಿಸಲು ಆನ್‍ಲೈನ್ ಸೌಲಭ್ಯ ಉಪಯೋಗಿಸುವಂತೆ ಹಾಗೂ ಈ ಸೌಲಭ್ಯವನ್ನು ಬಳಸಲು ಆಗದೆ ಇರುವವರು ಮಾತ್ರ ಸಂಬಂಧಿಸಿದ ಚಾವಿಸನಿನಿ ಕಚೇರಿಗಳ ಎಟಿಪಿ, ನಗದು ಕೌಂಟರ್‍ಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿದ್ಯುಚ್ಛಕ್ತಿ ಬಿಲ್ ಪಾವತಿಸುವಂತೆ ಕೋರಿದೆ.

ಆನ್‍ಲೈನ್ ಸೌಲಭ್ಯದ ಮಾಹಿತಿ: ಚಾವಿಸನಿನಿ ಜಾಲತಾಣ ತಿತಿತಿ.ಛಿesಛಿmಥಿsoಡಿe.oಡಿg ಬಿಬಿಪಿಎಸ್- ಭಾರತ್ ಬಿಲ್ ಪಾವತಿ ಸೇವೆ (ಬಿಲ್ ಡೆಸ್ಕ್, ಪೇಟಿಎಂ) ಬಿಬಿಪಿಎಸ್ ತಂತ್ರಾಂಶವನ್ನು ಒಳಗೊಂಡಂತೆ ಎಲ್ಲಾ ಬ್ಯಾಂಕ್ ವೆಬ್‍ಸೈಟ್‍ಗಳು ಮತ್ತು ಮೊಬೈಲ್ ಪಾವತಿ ಅಪ್ಲಿಕೇಶನ್‍ಗಳನ್ನು ಉಪಯೋಗಿಸಿ ನಗದು ರಹಿತ, ಡಿಜಿಟಲ್ ಪಾವತಿ ಮಾಡಬಹುದು.

ತಿತಿತಿ.ಛಿesಛಿmಥಿsoಡಿe.iಟಿ ನಗರ ಪ್ರದೇಶದ ವಿದ್ಯುಚ್ಛಕ್ತಿ ಗ್ರಾಹಕರ ಉಪಯೋಗಕ್ಕಾಗಿ, ಅಇSಅ ಒಥಿsoಡಿe ಂಟಿಜಡಿoiಜ ಚಿಠಿಠಿ (oಟಿಟಥಿ ಖuಡಿಚಿಟ) ಗ್ರಾಮೀಣ ಪ್ರದೇಶದ ವಿದುಚ್ಛಕ್ತಿ ಗ್ರಾಹಕರ ಉಪಯೋಗಕ್ಕಾಗಿ ಮತ್ತು ಕರ್ನಾಟಕ ಮೊಬೈಲ್ ಒನ್ ಆನ್ ಲೈನ್ ಮುಖಾಂತರ ಹಣ ಪಾವತಿಸಲು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.