ಗೋಣಿಕೊಪ್ಪಲು, ಏ. 3: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಹೊಟೇಲ್‍ಗಳು ಬಂದ್ ಆಗಿರುವುದರಿಂದ ನಗರದಲ್ಲಿ ಸಂಚರಿಸುವ ಬೀದಿ ನಾಯಿಗಳು ಹಸಿವಿನಿಂದ ಬಳಲುತ್ತಿರುವುದನ್ನು ಗಮನಿಸಿದ ಬಾಳೆಲೆ ಗ್ರಾಮದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅರಮಣಮಾಡ ರಂಜನ್ ಚಂಗಪ್ಪ ಮನೆಯಲ್ಲಿ ತಾವೇ ತಯಾರಿಸಿದ ಅಡುಗೆಯನ್ನು ತಂದು ಬಾಳೆಲೆ ಪಟ್ಟಣದಲ್ಲಿ ಅಲೆದಾಡುವ ನಾಯಿಗಳಿಗೆ ಬಾಳೆ ಎಲೆಯಲ್ಲಿ ಊಟ ಬಡಿಸುವ ಮೂಲಕ ಮಾನವೀಯತೆ ತೋರಿಸಿ ಬೀದಿ ನಾಯಿಗಳ ಹಸಿವು ನೀಗಿಸಿದರು.