ಮಡಿಕೇರಿ, ಏ. 2: ರಾತ್ರಿ ವೇಳೆÉ ವಾಹನದಲ್ಲಿ ಹೋರಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವಾಹನ ಸಹಿತ ಮಡಿಕೇರಿ ಗ್ರ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 9 ರ ವೇಳೆ ಬಲಮುರಿ ವಾಟೆಕಾಡುವಿನಲ್ಲಿ ಹೋರಿ ಯೊಂದನ್ನು ಪಿಕ್‍ಅಪ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ವಿಷಯ ತಿಳಿದ ಮಡಿಕೇರಿ ಗ್ರಾಮಾಂತರ ಪೊಲೀಸ್ ಎಸ್.ಐ. ಚಂದ್ರಶೇಖರ್ ಮತ್ತು ಸಿಬ್ಬಂದಿ ರಾತ್ರಿ 9.10 ರ ವೇಳೆ ಧಾಳಿ ನಡೆಸಿದರು. ಹೋರಿಯನ್ನು ರಕ್ಷಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕೊಟ್ಟಮುಡಿಯ ರಝಾಕ್ ಎಂಬಾತ ವಾಹನ ಚಾಲನೆ ಮಾಡುತ್ತಿದ್ದು, ಆತನನ್ನು ಹಾಗೂ ಮತ್ತೊಬ್ಬ ಆರೋಪಿ ಆರಿಸ್‍ನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಪಾಲೆಮಾಡುವಿನ ಸಿದ್ದಿಕ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ನಡೆದಿದೆ. ಹೋರಿಯನ್ನು ಪಾಲೇಮಾಡುವಿಗೆ ಸಾಗಿಸಿ ಬಳಿಕ ಕೇರಳಕ್ಕೆ ಸಾಗಿಸಲು ಆರೋಪಿಗಳು ತಯಾರಿ ನಡೆಸಿದ್ದರು ಎಂದು ತಿಳಿದುಬಂದಿದೆ.