ಮಡಿಕೇರಿ, ಏ. 2: ಕೇರಳದ ಪಾಣತ್ತೂರುವಿನ ಜುಮ್ಮಾ ಮಸೀದಿಯಲ್ಲಿ ಉಸ್ತಾದ್ ಆಗಿರುವ ಎಮ್ಮೆಮಾಡುವಿನ ಕುರುಳಿಪರಂಬು ನಿವಾಸಿ ಕೆ.ಎ. ಜಕ್ರೀಯ ಹಾಗೂ ಕರಿಕೆ ಸಮೀಪದ ತೋಚಂನ ಜುಮ್ಮಾ ಮಸೀದಿಯ ಉಸ್ತಾದ್ ಕೆ.ಎ. ಉಸ್ಮಾನ್ ಎಂಬಿಬ್ಬರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮಕೈಗೊಂಡಿದೆ.

ಈ ಇಬ್ಬರು ಜಿಲ್ಲಾಡಳಿತದ ನಿರ್ಬಂಧ ಉಲ್ಲಂಘಿಸಿ, ದ್ವಿಚಕ್ರ ವಾಹನ (ಕೆ.ಎ. 12. ಆರ್. 4016)ರಲ್ಲಿ; ಕೇರಳ ರಾಜ್ಯದಿಂದ ಕರಿಕೆ ಮೂಲಕ ಎಮ್ಮೆಮಾಡುವಿಗೆ ಬಂದಿರುವ ಮೇರೆಗೆ ಮೊಕದ್ದಮೆ ದಾಖಲಾಗಿದೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಎಸ್‍ಪಿ ಡಾ. ಸುಮನ್ ಡಿ.ಪಿ. ಅವರ ನಿರ್ದೇಶನದಂತೆ ಪಿಪಿಸಿ188 ಹಾಗೂ 269 ಮತ್ತು 51(ಬಿ) ಅಡಿಯಲ್ಲಿ ಮೊಕದ್ದಮೆಯೊಂದಿಗೆ ಇಬ್ಬರನ್ನು ಮಡಿಕೇರಿಯ ಜಿಲ್ಲಾ ಕ್ವಾರಂಟೈನ್‍ನಲ್ಲಿ ಸೇರಿಸಲಾಗಿದೆ.