ಬೆಂಗಳೂರು, ಏ. 2: 7 ಮತ್ತು 8ನೇ ತರಗತಿ ಗಳಿಗೆ ಪರೀಕ್ಷೆಯಿಲ್ಲದೆಯೇ ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸ ಲಾಗುವುದು. 9ನೇ ತರಗತಿ ವಿದ್ಯಾರ್ಥಿಗಳ ಆಂತರಿಕ ಪರೀಕ್ಷೆಯ ಆಧಾರದ ಮೇಲೆ 10ನೇ ತರಗತಿಗೆ ತೇರ್ಗಡೆಗೊಳಿಸ ಲಾಗುವುದು. ಏ. 14 ರ ನಂತರ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿ.ಯು.ಸಿ.ಯ ಇಂಗ್ಲೀಷ್ ಪರೀಕ್ಷೆ ದಿನಾಂಕ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಇಂದು ಫೇಸ್ಬುಕ್ನಲ್ಲಿ ವೀಡಿಯೋ ಲೈವ್ ಮೂಲಕ ಅವರು ಮಾತನಾಡುತ್ತಿದ್ದರು. 7 ಮತ್ತು 8ನೇ ತರಗತಿಗೆ ಯಾವದೇ ಷರತ್ತಿಲ್ಲದೆ ಎಲ್ಲ ಮಕ್ಕಳನ್ನೂ ನೇರ ತೇರ್ಗಡೆಗೊಳಿಸಲಾಗುತ್ತದೆ. 9ನೇ ತರಗತಿ ಮಕ್ಕಳಿಗೆ ಈ ಹಿಂದೆ ಶಾಲೆಯಲ್ಲಿ ನಡೆಸಲಾದ ರೂಪಣಾತ್ಮಕ ಮತ್ತು ಸಂಕಲನಾತÀ್ಮಕ ಪರೀಕ್ಷೆಗಳ ಮೌಲ್ಯಾಂಕÀಗಳನ್ನು ಪರಿಗಣಿಸಿ ಅರ್ಹತೆ ಆಧಾರದ ಮೇಲೆ ತೇರ್ಗಡೆಗೊಳಿಸಲಾಗುತ್ತದೆ ಎಂದರು. ಅಕಸ್ಮಾತ್ ಉತ್ತೀರ್ಣರಾಗದ 9ನೇ ತರಗತಿ ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಅಭ್ಯಸಿಸುವ ಮೂಲಕ ಕಲಿಯಬೇಕು. ಇಂತಹ ಮಕ್ಕಳಿಗೆ ಶೈಕ್ಷಣಿಕ ವರ್ಷಾರಂಭವಾದ ಜೂನ್ನಲ್ಲಿ ಮತ್ತೆ ಪರೀಕ್ಷೆ ನಡೆಸಲಾಗುವದು. ಆಗ ಉತ್ತೀರ್ಣರಾಗುವ ಅವಕಾಶವಿರುತ್ತದೆ ಎಂದರು.
7ನೇ ತರಗತಿಗೆ ಪ್ರಸಕ್ತ ವರ್ಷ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ನಡೆಸುವ ಉದ್ದೇಶ ಸರಕಾರಕ್ಕಿತ್ತು ಆದರೆ, ಕೊರೊನಾ ವೈರಸ್ ಪರಿಣಾಮದಿಂದಾಗಿ ಮಕ್ಕಳಿಗೆ ಪರೀಕ್ಷೆಯೇ ಇಲ್ಲದಂತಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ 8ನೇ ತರಗತಿ ಪ್ರಾರಂಭವಾದ ಬಳಿಕ ಆ ಮಕ್ಕಳ ಕಲಿಕಾ ಮಟ್ಟವನ್ನಾದರೂ ಗುರುತಿಸುವ ದೃಷ್ಟಿಯಿಂದ ಪ್ರಶ್ನೆ ಪತ್ರಿಕೆ ಮೂಲಕ ಶಾಲೆಗಳಲ್ಲಿ ಪರೀಕ್ಷೆÀ ನಡೆಸುವ ಯೋಚನೆಯಿದೆ ಎಂದು ಸಚಿವರು ನುಡಿದರು.ಎಸ್ಎಸ್ಎಲ್ಸಿ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಬಾಕಿಯಾಗಿರುವ ಇಂಗ್ಲೀಷ್ ಪರೀಕ್ಷೆಗೆ ತಾ. 14 ರ ಬಳಿಕ ದಿನಾಂಕ ನಿಗದಿಪಡಿಸಿ ನಡೆಸಲಾಗುವದು. ಆದರೆ ಮಕ್ಕಳಿಗೆ ಅಭ್ಯಸಿಸಲು ಸಾಕಷ್ಟು ಕಾಲಾವಕಾಶÀ ನೀಡಲಾಗುವದು ಎಂದು ಸಚಿವರು ಭರವಸೆಯಿತ್ತರು.
ಕೊರೊನಾ ಸೋಂಕಿನ ವಿರುದ್ಧ ಹೋರಾಡುವುದೂ ಒಂದು ಪರೀಕ್ಷೆಯಾಗಿದೆ. ಮಕ್ಕಳು ಯಾರೂ ಮನೆಯಿಂದ ಹೊರಬರಬಾರದು. ಪ್ರತಿನಿತ್ಯ ಇನ್ನಷ್ಟು ಪುಸ್ತಕಗಳನ್ನು ಓದಿ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕು. ಮಕ್ಕಳ ಆತಂಕದ ಬಗ್ಗೆ ತಿಳಿದಿದ್ದು, ಸರ್ಕಾರ ಅವರ ಜೊತೆ ಯಾವಾಗಲೂ ಇರುವುದಾಗಿ ಸುರೇಶ್ ಕುಮಾರ್ ಭರವಸೆ ನೀಡಿದರು.