ಗೋಣಿಕೊಪ್ಪಲು, ಏ. 2: ಕಳೆದ ಹಲವಾರು ದಿನಗಳಿಂದ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಕಪ್ರ್ಯೂ ಜಾರಿಯಾದ ದಿನದಿಂದಲೂ ಹಗಲು,ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ಗಳಿಗೆ ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.
ಕ್ಲಬ್ ಅಧ್ಯಕ್ಷ ಕಾಡ್ಯಮಾಡ ನೆವಿನ್ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆ ಹಾಗೂ ವೃತ್ತ ನಿರೀಕ್ಷಕರ ಕಚೇರಿಗೆ ತೆರಳಿದ ರೋಟರಿ ಪದಾಧಿಕಾರಿಗಳು ಮಧ್ಯಾಹ್ನದ ಭೋಜನ ವಿತರಿಸಿದರು.
ಈ ಸಂದರ್ಭ ಗೋಣಿಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಬೋಪಣ್ಣ, ರೋಟರಿ ಕ್ಲಬ್‍ನ ಖಜಾಂಚಿ ಅಜ್ಜಿಕುಟ್ಟಿರ ಸಜನ್, ರೋಟೆರಿಯನ್ ಡಾ. ಚಂದ್ರಶೇಖರ್, ಪ್ರಮೋದ್ ಕಾಮತ್, ಎಂ.ಕೆ. ದೀನಾ, ಅರುಣ್, ಕಿಶೋರ್ ಮೇದಪ್ಪ, ಸುಧೀರ್, ಮುಂತಾದವರು ಹಾಜರಿದ್ದರು.