ಕುಶಾಲನಗರ, ಏ. 1: ಪಟ್ಟಣದಲ್ಲಿ ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಭಿಕ್ಷುಕರ ಹಸಿದ ಹೊಟ್ಟೆಗೆ ಆಹಾರ ನೀಡುವ ಮೂಲಕ ಹಸಿವು ತಣಿಸುವ ಪೆಟ್ಟಿಗೆ ಕಾರ್ಯಕ್ರಮಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.

ಪಟ್ಟಣದ ಗಣಪತಿ ದೇವಾಲಯ ಸರ್ಕಲ್ ಬಳಿ ವೃತ್ತ ನಿರೀಕ್ಷಕ ಮಹೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡದರು. ವಿವಿಧೆಡೆಗಳಿಂದ ಕೂಲಿ ಅರಸಿ ಪಟ್ಟಣಕ್ಕೆ ಬಂದಿರುವ ದಿನಗೂಲಿ, ಕಟ್ಟಡ ಕಾರ್ಮಿಕರು, ಭಿಕ್ಷುಕರು ಸೇರಿದಂತೆ ಊಟವಿಲ್ಲದೆ ತೊಂದರೆಗೆ ಸಿಲುಕಿರುವ ನೂರಾರು ಜನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಹಸಿವು ತಣಿಸುವ ಪೆಟ್ಟಿಗೆ ಕಾರ್ಯಕ್ರಮ ರೂಪಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ದಾನಿಗಳು ಅಗತ್ಯ ದಿನಸಿ, ತರಕಾರಿಗಳನ್ನು ನೀಡುವ ಮೂಲಕ ಸಹಕಾರ ನೀಡಬೇಕು ಎಂದರು. ಉದ್ಯಮಿ ಬಿಎಸ್‍ಆರ್ ಜಗದೀಶ್ ಅವರು ಒಂದು ಸಾವಿರ ಜನರಿಗೆ ಊಟಕ್ಕೆ ಬೇಕಾದ ಅಗತ್ಯ ದಿನಸಿ ಪದಾರ್ಥಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ನಾಡುಕಚೇರಿ ಕಂದಾಯ ಅಧಿಕಾರಿ ಮಧುಸೂದನ್, ಪ.ಪಂ.ಸದಸ್ಯ ಬಿ.ಅಮೃತ್ ರಾಜ್, ಉದ್ಯಮಿ ಜಗದೀಶ್ ಮತ್ತಿತರರು ಇದ್ದರು.