ನವದೆಹಲಿ, ಏ. 1: ಕೊರೊನಾ ಸೋಂಕು ಪೀಡಿತರ ನೆರವಿಗೆ ಕೇಂದ್ರ ಸರ್ಕಾರ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ಮುಂದಾಗಿರುವ ಬೆನ್ನ ಹಿಂದೆಯೇ ನಕಲಿ ಖಾತೆಗಳು ಸೃಷ್ಟಿಯಾಗಿವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಎಚ್ಚರಿಕೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಕೊರೊನಾ ಮಾರಿ ಓಡಿಸಲು ಸಾರ್ವಜನಿಕರು ದೇಣಿಗೆ ನೀಡಬೇಕು ಎಂದು ಕೋರಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಕಲಿ ಖಾತೆ ಸೃಷ್ಟಿಸಿ ಹಣ ದೋಚಲು ಮುಂದಾಗಿದ್ದಾರೆ.

ನಕಲಿ ಐಡಿ: ‘‘ಪಿ.ಎಂ.ಕೇರ್ಸ್ ಫಂಡ್’’ ಯುಪಿಐ ಐಡಿ ‘‘ಠಿmಛಿಚಿಡಿe@uಠಿi’’ ಎಂಬ ಹೆಸರಿನಲ್ಲಿ ಹಣ ಕಳಿಸುವಂತೆ ಮನವಿ ಬಂದರೆ ಈ ಐಡಿಗೆ ಹಣ ಕಳುಹಿಸಬೇಡಿ ಎಂದು ಕೇಂದ್ರ ಸರಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ದೇಣಿಗೆ ನೀಡುವ ಸಾರ್ವಜನಿಕರು ‘‘ಪಿ.ಎಂ. ಕೇರ್ಸ್ ಫಂಡ್’’ ಯುಪಿಐ ಐಡಿ’’ ‘‘ಠಿmಛಿಚಿಡಿes@sbi’’ಗೆ ಹಣ ನೀಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.