ಕೂಡಿಗೆ, ಮಾ. 30: ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಎಲ್ಲಾ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳು 12 ಗಂಟೆಯವರೆಗೆ ತೆರೆದಿದ್ದವು.ಈ ವ್ಯಾಪ್ತಿಯ ಕಾರ್ಮಿಕರು ಹಾಲನ್ನು ಸಹಕಾರ ಸಂಘಕ್ಕೆ ಹಾಕಿ ರೈತರು ಮತ್ತು ಇತರ ವ್ಯವಹಾರದವರು, ಮಹಿಳೆಯರು ಮತ್ತು ಪುರುಷರು ಸಾಲಾಗಿ ನಿಂತು ಹಾಲಿನ ಹಣ ಪಡೆಯುತ್ತಿದ್ದುದು ಕಂಡುಬಂದಿತು.