ಗೋಣಿಕೊಪ್ಪ ವರದಿ, ಮಾ. 30: ಕೊರೊನಾ ಜಾಗೃತಿ ಮುಂದುವರಿದಿದ್ದು, ಗೋಣಿಕೊಪ್ಪ ಬಸ್ಸು ನಿಲ್ದಾಣದಲ್ಲಿ ಪೊಲೀಸ್ ಇಲಾಖೆ ಮೂಲಕ ಕೊರೊನಾ ವೈರಸ್ ಚಿತ್ರ ಬಿಡಿಸಿ ಜಾಗೃತಿ ಮೂಡಿಸಲಾಗುತ್ತಿದೆ.
‘ಬಂದರೆ ನೀ ಬೀದಿಗೆ... ಬರುವೆ ನಾ ನಿಮ್ಮನೇಗೆ' ಎಂದು ವೈರಸ್ ಹೇಳುವಂತೆ ಚಿತ್ರ ಬಿಡಿಸಿ ಪೊನ್ನಂಪೇಟೆಯಲ್ಲಿ ಯಶಸ್ವಿಯಾದ ಬೆನ್ನಲ್ಲೆ, ಇಲ್ಲಿಯೂ ಚಾಲನೆ ನೀಡಲಾಯಿತು.
ಈ ಸಂದರ್ಭ ಪೊಲೀಸ್ ಉಪ ನಿರೀಕ್ಷಕ ಸುರೇಶ್ ಬೋಪಣ್ಣ ಇದ್ದರು.