ಮಡಿಕೇರಿ, ಮಾ. 30: ಜಿಲ್ಲೆಯಲ್ಲಿ ಎರಡು ದಿನಗಳ ಸಂಪೂರ್ಣ ಬಂದ್ ಬಳಿಕ ಸೋಮವಾರದಂದು ಜನತೆ ದಿನಸಿ ಅಂಗಡಿಗಳಿಗೆ ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಂಗಡಿ ಮಾಲೀಕರಿಗೆ ಮೊಬೈಲ್ ಮೂಲಕ ಹಾಗೂ ಜಿಲ್ಲಾಡಳಿತ ಹೊರ ತಂದಿರುವ ಹೊಸ ವೆಬ್‍ಸೈಟ್ ಮೂಲಕ ಅಗತ್ಯ ವಸ್ತುಗಳ ಬೇಡಿಕೆ ಸಲ್ಲಿಸಿದ್ದರು. ಆದರೆ ಮೈಸೂರಿನ ಸಗಟು ಮಳಿಗೆಗಳಿಂದ ಅಗತ್ಯ ದಿನಸಿ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾಗಿ ಗ್ರಾಹಕರು ಬಯಸಿದ ಎಲ್ಲಾ ವಸ್ತುಗಳು ಲಭ್ಯವಾಗಲಿಲ್ಲ. ಈ ಬಗ್ಗೆ ಕೊಡಗು ಜಿಲ್ಲಾ ಚೇಂಬರ್ ಹಾಗೂ ಮಡಿಕೇರಿ ಸ್ಥಾನೀಯ ಸಮಿತಿ ತುರ್ತು ಸಭೆ ನಡೆಸಿ ಮೈಸೂರಿನ ಉದ್ಯಮಿ ಹಾಗೂ ರಾಜ್ಯ ಚೇಂಬರ್‍ನ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ಅವರನ್ನು ಸಂಪರ್ಕಿಸಿ ಕೊಡಗಿನ ವ್ಯಾಪಾರಸ್ಥರಿಗೆ ಮೈಸೂರಿನಲ್ಲಿ ದಿನಸಿ ಸಾಮಗ್ರಿಗಳು ನಿರಾತಂಕವಾಗಿ ಲಭ್ಯ ವಾಗುವಂತೆ ಸಹಕರಿಸಲು ಕೋರಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್ ಶೆಟ್ಟಿ ಅವರು ಸಗಟು ದಾಸ್ತಾನು ಮಳಿಗೆಗಳಲ್ಲಿ ವಸ್ತುಗಳು ಲಭ್ಯವಿದ್ದು; ತನ್ನನ್ನು ಸಂಪರ್ಕಿಸಬಹುದು ಎಂದರು.
ಚೇಂಬರ್‍ನ ಸಭೆಯಲ್ಲಿ ಮಡಿಕೇರಿ ನಗರದ ವಿವಿಧೆಡೆ ಜನತೆ ದಿನಸಿ ಸಾಮಗ್ರಿಗೆ ಅಂಗಡಿಗಳಿಗೆ ಬರುವದನ್ನು ತಪ್ಪಿಸಲು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವ ಬಗ್ಗೆ ಚರ್ಚಿಸಲಾಯಿತು. ಮಡಿಕೇರಿಯ ಏಳು ವಿಭಾಗಗಳಲ್ಲಿ ಚೇಂಬರ್ ಸದಸ್ಯರು ತಾ. 31 ರಿಂದ ಗ್ರಾಹಕರಿಗೆ ಅಗತ್ಯವಿದ್ದಲ್ಲಿ ಅವರ ವಸ್ತುಗಳನ್ನು ಅಂಗಡಿಗಳಿಂದ ಸಂಗ್ರಹಿಸಿ ತಲುಪಿಸಲು ತಂಡಗಳನ್ನು ರಚಿಸಲಾಯಿತು. ತಂಡದÀ ವಿವರ ಇಂತಿದೆ.