ಕುಶಾಲನಗರ, ಮಾ. 28: ತರಕಾರಿ ಮತ್ತಿತರ ಅಗತ್ಯ ವಸ್ತು ಗಳನ್ನು ಮನೆ-ಮನೆಗೆ ತಲುಪಿಸಲು ಕುಶಾಲನಗರದಲ್ಲಿ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ

ಅಧಿಕ ಸಂಖ್ಯೆಯಲ್ಲಿ ಜನರು ಸೇರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.

ಸ್ಥಳೀಯ ವ್ಯಾಪಾರಿಗೆ ಈ ಸಂಬಂಧ ಅನುಮತಿ ನೀಡ ಲಾಗಿದ್ದು, ಲಾರಿಯೊಂದರಲ್ಲಿ ತರ ಕಾರಿಯನ್ನು ವಿವಿಧ ಬಡಾವಣೆ ಗಳಲ್ಲಿ ತೆರಳಿ ಮನೆಮನೆಗೆ ಹಂಚುವ ಕ್ರಮ ಇದಾಗಿದೆ. ತರಕಾರಿಯನ್ನು ಮೈಸೂರಿನ ಎಪಿಎಂಸಿ ದರದಲ್ಲಿ ಗ್ರಾಹಕರಿಗೆ ಒದಗಿಸಬೇಕಾಗಿದೆ ದರ ನಿಗದಿಯನ್ನು ಪೊಲೀಸ್ ಅಧಿಕಾರಿಗಳು ಕಂದಾಯಾಧಿ ಕಾರಿಗಳು ದಿನನಿತ್ಯ ಗಮನಿಸುವುದಾಗಿ ತಿಳಿಸಿದ್ದಾರೆ. ವಿವಿಧ ಬಡಾವಣೆಗಳಿಗೆ ಮತ್ತು ನೆರೆಯ ಗ್ರಾಮಗಳ ಮನೆ ಮನೆಗೆ ಸೇವೆ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಯಾವುದೇ ಸಂದರ್ಭ ತರಕಾರಿ ಅಥವಾ ವಸ್ತುಗಳಿಗೆ ಅಧಿಕ ದರ ಪಡೆದ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಕುಶಾಲನಗರ ಪೊಲೀಸ್ ಠಾಣೆ ಸಮೀಪ ತರಕಾರಿ ತುಂಬಿದ ಲಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಡಿವೈಎಸ್ಪಿ ಶೈಲೇಂದ್ರ ಕುಮಾರ್, ತಾಲೂಕು ತಹಶೀಲ್ದಾರ್ ಗೋವಿಂದರಾಜು ಕಾರ್ಯ ನಿರ್ವಹಣಾ ಅಧಿಕಾರಿ ಸುನಿಲ್ ಕುಮಾರ್, ಕುಶಾಲನಗರ ಪೊಲೀಸರು, ಕಂದಾಯ ಇಲಾಖೆ ನೌಕರರು ಇದ್ದರು.