ಮಡಿಕೇರಿ, ಮಾ. 29: ಸಾಕು ಪ್ರಾಣಿಯೊಂದಿಗಿರುವವರು ಕೊರೊನಾ ಬಗ್ಗೆ ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ, ಈವರೆಗೆ ಸಾಕುಪ್ರಾಣಿಗಳಿಂದ ಮನುಷ್ಯನಿಗೆ ಕೊರೊನಾ ಹರಡಿರುವ ಮಾಹಿತಿ ಪ್ರಕಟವಾಗಿಲ್ಲ ವೆಂದು Wಊಔ (ವಿಶ್ವ ಆರೋಗ್ಯ ಸಂಸ್ಥೆ) ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಸಾಕು ಪ್ರಾಣಿಗಳಾದ ಬೆಕ್ಕು ಅಥವಾ ನಾಯಿಗಳಿಂದ ಮಾನವನಿಗೆ ಕೊರೊನಾ ಈವರೆಗೆ ಹರಡಿರುವುದಿಲ್ಲ. ಚೀನಾದಲ್ಲಿ ಸಾಕುನಾಯಿಗೆ ತನ್ನ ಮಾಲೀಕನಿಂದಲೇ ಕೊರೊನಾ ಹರಡಿರುವ ಶಂಕೆ ವ್ಯಕ್ತಗೊಂಡಿದ್ದು, ಪ್ರಕಟಗೊಂಡಿರುತ್ತದೆಯಾದರು ಇದು ಇನ್ನಷ್ಟೆ ಸಾಬೀತಾಗಬೇಕಿದೆ ಎಂದು Wಊಔ ತಿಳಿಸಿದೆ. ಮನೆಯಲ್ಲಿ ಯಾರಾದರೂ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೆ ಅಂತವರು ಸಾಕುಪ್ರಾಣಿ ಗಳ ಆರೈಕೆ ಮಾಡದೆ ಮನೆಯ ಇತರ ಸದಸ್ಯರು ಮಾಡುವಂತಾಗಬೇಕು. ಸಾಕುಪ್ರಾಣಿಗಳಿಗೆ ಮನುಷ್ಯನಿಂದ ಕೊರೊನಾ ಹರಡಲು ಸಾಧ್ಯತೆ ಇದೆಯಾದರು ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಕೊರೊನಾ ಹರಡುವದಿಲ್ಲ, ಸಾಕುಪ್ರಾಣಿಗಳ ಮಾಲೀಕರು ಎಂದಿನಂತೆ ಪ್ರಾಣಿಗಳನ್ನು ಆರೈಸಿ ಕೈಗಳನ್ನು ತೊಳೆದುಕೊಂಡು ಶುಚಿತ್ವದೊಂದಿಗೆ ಮುನ್ನೆಚ್ಚರಿಕೆ ವಹಿಸಿದರೆ ಸಾಕು ಎಂದು Wಊಔ ತಿಳಿಸಿದೆ.