ಪೆರಾಜೆ, ಮಾ. 28: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೇರಳದ ಮೂರು ರಸ್ತೆಗಳಾದ ಕಮ್ಮಾಡಿ- ಓಂಗಿಲ್ ಪಾರೆ, ಕೂರ್ನಡ್ಕ-ಕುಂದಲ್ಪಾಡಿ ಪೆರಾಜೆ, ಕಮ್ಮಾಡಿ-ಕರಟಡ್ಕ ಈ ರಸ್ತೆಗಳನ್ನು ಜೆ.ಸಿ.ಬಿ ಸಹಾಯದಿಂದ ಮಣ್ಣು ಹಾಕಿ ಮುಚ್ಚಲಾಯಿತು. ದಿನೇ ದಿನೇ ಕೇರಳದಲ್ಲಿ ಮುಖ್ಯವಾಗಿ ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಮಡಿಕೇರಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಚಂದ್ರಶೇಖರ್ ಅವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಯಿತು.