ಮಡಿಕೇರಿ, ಮಾ. 28: ಜಿಲ್ಲೆಯಲ್ಲಿ ಕೊರೊನಾ ವೈರಸ್ ಪೀಡಿತ ಪ್ರಕರಣ 1 ಪತ್ತೆಯಾಗಿದ್ದು ಮತ್ತು ವೈರಸ್ ಹರಡದಂತೆ ಅವಲೋಕನೆಗೆ ಪಟ್ಟಿ ಮಾಡಲ್ಪಟ್ಟವರು ಮತ್ತು ಕೆಲವು ಶಂಕಿತ ಪ್ರಕರಣಗಳನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಸಂಬಂಧ ನಗರ ಮತ್ತು ಹೋಬಳಿ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಳಕಂಡ ಅಧಿಕಾರಿಗಳ ಕಾರ್ಯಪಡೆ ರಚಿಸಿ ನೇಮಿಸಲಾಗಿದೆ.
ಎಲ್ಲಾ ನೋಡಲ್ ಅಧಿಕಾರಿಗಳು ಹಾಗೂ ಕಾರ್ಯಪಡೆ ಮುಖ್ಯಸ್ಥರೊಂದಿಗೆ ಸಮನ್ವಯ ಸಾಧಿಸಲು ಹೆಚ್ಚುವರಿ ಜಿಲ್ಲಾಧಿಕಾರಿ (8277863436), ಕೊಡಗು ವೈದ್ಯಕೀಯ ಕಾಲೇಜಿನಿಂದ ಮಾಹಿತಿ ಪಡೆಯುವುದು, ಜಿಲ್ಲೆಯಲ್ಲಿ ಮಾಸ್ ಕ್ವಾರಂಟೈನ್ ಐಸೋಲೇಶನ್ ಬಗ್ಗೆ ಸೂಕ್ತ ಕ್ರಮ ವಹಿಸಲು ಉಪ ವಿಭಾಗಾಧಿಕಾರಿ (9739979309), ಸಂಪರ್ಕ ಪತ್ತೆಹಚ್ಚುವಿಕೆ, ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದ ವ್ಯಕ್ತಿಯ ಪ್ರಯಾಣ ಸಂಪರ್ಕ ಪತ್ತೆ ಹಚ್ಚುವುದು, ರಾಜ್ಯ ಸಂಪರ್ಕ ಪತ್ತೆ ಹಚ್ಚುವ ತಂಡದೊಂದಿಗೆ ಸಮನ್ವಯತೆ ಸಾಧಿಸಲು ಜಿಲ್ಲಾ ಸರ್ವೇಕ್ಷಣಾಧಿಕಾರಿ (9449843263), ಲ್ಯಾಬ್ ಪರೀಕ್ಷೆ ಸ್ಯಾಂಪಲ್ ಸಂಗ್ರಹ ಕೇಂದ್ರದೊಂದಿಗೆ ಸಂಪರ್ಕ ಸಾಧಿಸುವುದು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಕ್ಷಣ ಮಾಹಿತಿ ಒದಗಿಸುವುದು ಮುಖ್ಯಸ್ಥರು ಮೈಕ್ರೋಬಯಾಲಜಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ (9844103642), ಗೃಹ ಸಂಪರ್ಕ ತಡೆ ಮೇಲ್ವಿಚಾರಣೆ ಮತ್ತು ಶಂಕಿತರ ಕೈಗೆ ಮೊಹರು ಹಾಗೂ ಮನೆಯ ಮುಂದೆ ಪೋಸ್ಟರ್ ಅಂಟಿಸಿರುವುದನ್ನು ಖಚಿತ ಪಡಿಸಿಕೊಳ್ಳುವುದು ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ (9480695260), ಕಂಟ್ರೋಲ್ ರೂಂ ಮೇಲ್ವಿಚಾರಣೆ, ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವುದು ಹೊರ ಜಿಲ್ಲೆಗಳಿಂದ ಕರ್ತವ್ಯ ನಿಮಿತ್ತ ಆಗಮಿಸುವ ವೈದ್ಯರು ಹಾಗೂ ಪ್ಯಾರ ಮೆಡಿಕಲ್ ಸಿಬ್ಬಂದಿಗಳೊಂದಿಗೆ ಸಮನ್ವಯತೆ ಸಾಧಿಸುವುದು, ಕಂಟ್ರೋಲ್ ರೂಂನಲ್ಲಿ ಸರತಿಯಂತೆ ಕಾರ್ಯ ನಿರ್ವಹಿಸುವುದನ್ನು ಖಚಿತ ಪಡಿಸಿಕೊಳ್ಳುವುದು ಉಪ ನಿರ್ದೇಶಕರು ಭೂ ದಾಖಲೆಗಳ ಇಲಾಖೆ (9880199312), ಆಹಾರ ಮತ್ತು ಅಗತ್ಯ ವಸ್ತುಗಳ ಸಮರ್ಪಕ ಪೂರೈಕೆ ಮೇಲ್ವಿಚಾರಣೆ ಹಾಗೂ ಸಮನ್ವಯತೆ ಸಾಧಿಸುವುದು ಉಪ ನಿರ್ದೇಶಕರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ (9886680624), ಅಗತ್ಯ ವೈದ್ಯಕೀಯ ಸಾಮಾಗ್ರಿ ಪೂರೈಕೆ ಮತ್ತು ಮೇಲ್ವಿಚಾರಣೆ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಲು ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ (9780869001), ಪಾಸಿಟಿವ್ ಪ್ರಕರಣಗಳಲ್ಲಿ ಮೃತಪಟ್ಟಲ್ಲಿ ಮೃತದೇಹಗಳನ್ನು ಕಡ್ಡಾಯವಾಗಿ ಎಸ್‍ಒಪಿ ಪ್ರಕಾರ ನಿರ್ವಹಣೆ ಮತ್ತು ಕ್ರಮವಹಿಸಲು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಫೊರೆನ್ಸಿಕ್ ವಿಭಾಗದ ಮುಖ್ಯಸ್ಥರು (9986116341), ಈ ಅಧಿಕಾರಿಗಳು ತಮಗೆ ವಹಿಸಿದ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು ತಿಳಿಸಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.