*ಗೋಣಿಕೊಪ್ಪ, ಮಾ. 27: ಹಿರಿಯರ ಕಾಲಿಗೆ ಗೌರವಪೂರ್ವಕ ಸಾಷ್ಟಾಂಗ ನಮಸ್ಕಾರ ಮತ್ತು ಕಿರಿಯರಿಗೆ ಕೈಮುಗಿದು ನಮ ಸ್ಕರಿಸುತ್ತಾ, ಮನೆಯಿಂದ ಹೊರ ಬರಬೇಡಿ, ಕೊರೊನಾ ವೈರಸ್ ತರಬೇಡಿ ಎಂದು ಹೇಳುತ್ತಾ, ಗೋಣಿಕೊಪ್ಪ ವ್ಯಾಪ್ತಿಯ ಈರಣ್ಣ ಕಾಲೋನಿ ಮತ್ತು ಕಾಳಪ್ಪ ಕಾಲೋನಿಗಳಲ್ಲಿ ಯುವಕರ ತಂಡ ಕೊರೊನಾ ವೈರಸ್ ಮಹಾಮಾರಿ ಯಿಂದ ತಪ್ಪಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿದರು.
ಗೃಹ ಉಪಯೋಗಿ ವಸ್ತುಗಳು ಬೇಕಾದಲ್ಲಿ ನಾವೇ ತಂದುಕೊಡುತ್ತೇವೆ, ನೀವಂತೂ ಹೊರಗೆ ಬರುವುದು ಬೇಡ ಎಂದು ಮನವಿ ಮಾಡಿಕೊಂಡ ಯುವಕರ ತಂಡ ತಾವೇ ತಮ್ಮ ಸ್ವಂತ ಖರ್ಚಿನಿಂದ ಮಾಸ್ಕ್‍ಗಳನ್ನು ಹೊಲಿದು ಮನೆಮನೆಗಳಿಗೆ ತೆರಳಿ ಉಚಿತವಾಗಿ ವಿತರಿಸಿದರು. ಪೆÇಲೀಸರ ನಿಯಂತ್ರಣದಲ್ಲಿ ಶುಕ್ರವಾರವು ಪೆÇನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಪಾಲಿಬೆಟ್ಟ, ಗಾ.್ರಪಂ. ವ್ಯಾಪ್ತಿಗಳಲ್ಲಿ ಜನ ವಸ್ತುಗಳ ಖರೀದಿಗೆ ಮುಂದಾದರು.
ಗೋಣಿಕೊಪ್ಪ, ಪೆÇನ್ನಂಪೇಟೆ ಗಳಲ್ಲಿ ಕುರಿ ಮಾಂಸ ಕೆ.ಜಿಗೆ ಏಳುನೂರು ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಬೆಲೆ ಏರಿಕೆಯಿಂದ ಮಾಂಸ ಪ್ರಿಯರು ನಿರಾಶರಾದರು. ಸ್ಥಳೀಯರ ದೂರಿನ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರು ಮಾಂಸ ಮಳಿಗೆಗೆ ಭೇಟಿ ನೀಡಿ ಹೆಚ್ಚಿನ ಬೆಲೆಗೆ ಮಾರದಂತೆ ಸಲಹೆ ನೀಡಿದರು. ನಿಯಮ ಮೀರಿ ಮಾಂಸ ಮಾರಾಟ ಮಾಡಿದರೆ ಪರವಾನಗಿ ರದ್ದು ಗೊಳಿಸುವ ಎಚ್ಚರಿಕೆ ನೀಡಿದರು.
ಸ್ಥಳೀಯ ರೈತರು ತಮ್ಮ ಕೆರೆಯಲ್ಲಿ ಸಾಕಿದ ಮೀನು ಹಿಡಿದು ಮಾರಾಟ ಮಾಡಿದರು. ಮೀನು ಪ್ರಿಯರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿ ಸಂತೃಪ್ತರಾದರು.
ಪೆÇಲೀಸರು ಮಾಸ್ಕ್ ಧರಿಸದ ವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಇಲ್ಲವಾದಲ್ಲಿ ಕರವಸ್ತ್ರ ವನ್ನು ಕಟ್ಟಿಕೊಳ್ಳುವಂತೆ ಸೂಚಿಸಿದರು. ಪ್ರತಿಯೊಬ್ಬರೂ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದು ಕೊಳ್ಳುವಂತೆ ಸಲಹೆ ನೀಡಿದರು. ಪಟ್ಟಣದಲ್ಲಿರುವ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಕಲ್ಪಿಸಲು ವ್ಯಾಪಾರಿ ತಮ್ಮ ಸ್ವ ಇಚ್ಛೆಯಿಂದ ಗ್ರಾಮ ಪಂಚಾಯಿತಿ ಯೊಂದಿಗೆ ಕೈ ಜೋಡಿಸಿ ಸ್ಥಳೀಯ ಕ್ಯಾಂಟೀನ್ ಒಂದರಲ್ಲಿ ಊಟದ ವ್ಯವಸ್ಥೆ ಮಾಡಲು ಮುಂದಾದರು.
-ಚಿತ್ರವರದಿ: ಎನ್. ಎನ್. ದಿನೇಶ್