ಮಡಿಕೇರಿ, ಮಾ. 27: ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿ ಕ್ಲಿನಿಕ್‍ನಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟಲು ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆ ಮಾಡುವುದನ್ನು ನಿಲ್ಲಿಸಲಾಗಿದೆ. ಜನ ಒಟ್ಟುಗೂಡುವುದನ್ನು ತಡೆಗಟ್ಟುವುದಕ್ಕಾಗಿ ತುರ್ತು ಚಿಕಿತ್ಸಾ ಸೌಲಭ್ಯಗಳಿಗಾಗಿ ಮಾತ್ರ ಆಸ್ಪತ್ರೆಗೆ ಬರಲು ಅವಕಾಶವಿದೆ. ಮಾಜಿ ಸೈನಿಕರು ಮತ್ತು ಅವರ ಮನೆಯವರು ತಮ್ಮ ಏಪ್ರಿಲ್ ತಿಂಗಳ ಔಷಧಿಗಾಗಿ ಇ.ಸಿ.ಹೆಚ್.ಎಸ್. ಪಾಲಿ ಕ್ಲಿನಿಕ್‍ನಲ್ಲಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಹತ್ತಿರದ ಖಾಸಗಿ ಮೆಡಿಕಲ್ ಶಾಪಿನಲ್ಲಿ ಏಪ್ರಿಲ್ ತಿಂಗಳ ಔಷಧಿಯನ್ನು ಖರೀದಿಸಿ ಅದರ ಖರ್ಚನ್ನು ಮೇ 15ರ ನಂತg ಪಡೆಯಬಹುದೆಂದು ಕ್ಲಿನಿಕ್ ಪ್ರಕಟಣೆ ತಿಳಿಸಿದೆ.