ನಾಪೋಕ್ಲು, ಮಾ. 26: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಹಸುವೊಂದು ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಕೈಕಾಡಿನಲ್ಲಿ ತಾ. 25ರಂದು ನಡೆದಿದೆ. ಪಾರಾಣೆಯ ಕೈಕಾಡು ಗ್ರಾಮದಲ್ಲಿ ಗಾಳಿಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗ್ರಾಮದ ಕದ್ದಣಿಯಂಡ ಚಿಣ್ಣಪ್ಪ ಅವರ ಹಸು ತುಳಿದು ಸಾವನ್ನಪ್ಪಿದೆ. ಈ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.