ಮಡಿಕೇರಿ, ಮಾ. 26: ತಾ. 24 ರಂದು ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಂಜಾನೆ ಪತ್ರಿಕೆಗಳನ್ನು ಹಂಚಲು ಪೊಲೀಸರು ಅಡ್ಡಿ ಪಡಿಸಿದ ಹಿನ್ನೆಲೆ ಮಾದ್ಯಮ ಮಿತ್ರರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದರು.

ತಕ್ಷಣವೇ ಸ್ಪಂದಿಸಿದ ಜಿಲ್ಲಾಡಳಿತ ತುರ್ತು ವ್ಯವಸ್ಥೆ ಕೈಗೊಂಡು ನಿರಾತಂಕವಾಗಿ ಪತ್ರಿಕಾ ಸರಬರಾಜು ಮಾಡಲು ಅವಕಾಶ ಕಲ್ಪಿಸಿತು. ಈ ಸಂದರ್ಭ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ಕುಟ್ಟಪ್ಪ, ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಪ್ರಜಾಸತ್ಯ ಸಂಪಾದಕ ಡಾ. ನವೀನ್ ಕುಮಾರ್, ಕಾವೇರಿ ಟೈಮ್ಸ್ ಪ್ರಕಾಶಕ ಬೊಳ್ಳಜ್ಜೀರ ಅಯ್ಯಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.