ಮಡಿಕೇರಿ, ಮಾ. 26: ಇಲ್ಲಿನ ತಾಲೂಕು ಕಚೇರಿಗೆ ಹೊಂದಿ ಕೊಂಡಿರುವ ಪಶು ಸಂಗೋಪನಾ ಇಲಾಖೆಯ ಕಚೇರಿಯನ್ನು ಧೂಳು ಹೊಡೆದು ನಿರುಪಯುಕ್ತ ವಸ್ತುಗಳನ್ನು ಸುಟ್ಟುಹಾಕಿ ಶುಚಿಗೊಳಿಸುವ ಕಾರ್ಯದಲ್ಲಿ ಕಚೇರಿ ಸಿಬ್ಬಂದಿ ತೊಡಗಿದ ದೃಶ್ಯ ಎದುರಾಯಿತು.

ದೈನಂದಿನ ಕಾರ್ಯ ಒತ್ತಡವಿಲ್ಲದೆ ಕೊರೊನಾ ಭೀತಿ ನಡುವೆ ಸಮಯ ಕಳೆಯುತ್ತಿದ್ದ; ಪಶು ಚಿಕಿತ್ಸಾ ಘಟಕ ಸಿಬ್ಬಂದಿ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು. ಇಡೀ ಕಚೇರಿಯ ಕಸ ಇತ್ಯಾದಿ ತೆರವುಗೊಳಿಸಿ, ಬ್ಲೀಚಿಂಗ್ ಪೌಡರ್ ಸಹಿತ ಆವರಣದೊಳಗೆ ಸ್ವಚ್ಛತೆಯಲ್ಲಿ ತೊಡಗಿದ್ದರು.