ಗೋಣಿಕೊಪ್ಪಲು, ಮಾ. 24: ದೇಶದೆಲ್ಲೆಡೆ ಕೊರೊನಾ ಭೀತಿಯಲ್ಲಿ ಮುಳುಗಿರುವಾಗ ಮನೆಯಿಂದ ಯಾರು ಹೊರ ಬಾರದೆಂಬ ನಿರ್ದೇಶನವಿದ್ದರೂ ಇದನ್ನು ಬದಿಗೊತ್ತಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್ ಮುಂದಾಳತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಕಳೆದ 21ರಂದು ಕಾಡಾನೆ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿರುವ ಮಾಯಮುಡಿ ಗ್ರಾಮದ ಕಾವಲ ಎಂಬ ಕಾರ್ಮಿಕನಿಗೆ ಚಿಕಿತ್ಸೆ ವೆಚ್ಚಕ್ಕಾಗಿ ಅರಣ್ಯ ಇಲಾಖೆ ವತಿಯಿಂದ ಮೊದಲ ಕಂತಿನಲ್ಲಿ 25 ಸಾವಿರ ಚೆಕ್ಅನ್ನು ಕೊಡಿಸಿದರು. ಈ ಸಂದರ್ಭ ರೈತ ಸಂಘದ ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಬಿದ್ದಪ್ಪ, ಸಂಚಾಲಕರಾದ ಪೆಮ್ಮಂಡ ಉಮೇಶ್, ಸದಸ್ಯರಾದ ಸಾಗರ, ಪ್ರಕಾಶ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಶೋಕ್ ಹುನಗುಂದ, ಉಮಾಶಂಕರ್, ಮುಂತಾದವರು ಹಾಜರಿದ್ದರು.