ಕೂಡಿಗೆ ಮಾ. 22: ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶ ವಾಗಿರು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ರಸ್ತೆಯ ಕಾಮಗಾರಿಯು ಭರದಿಂದ ಸಾಗುತ್ತಿದೆ.

ಸರಕಾರದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ 9.50 ಕೋಟಿ ಹಣ ಬಿಡುಗಡೆ ಅಗಿದ್ದು, ಭೂಮಿ ಪೂಜೆಯ ನಂತರ ಮೊದಲ ಪ್ರಾಥಮಿಕ ಹಂತ ಕಾಮಗಾರಿಯು ನಡೆಯುತ್ತದೆ. ಈ ಕಾಮಗಾರಿಯಲ್ಲಿ ಕೈಗಾರಿಕಾ ಪ್ರದೇಶವಾದ. ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆ, ಎರಡು ಬದಿಯಲ್ಲಿ ಚರಂಡಿಯ ವ್ಯವಸ್ಥೆ. ಅಲ್ಲದೆ ಉಪ ರಸ್ತೆಗಳನ್ನು ದುರಸ್ತಿ ಮಾಡುವುದುಅಲ್ಲದೆ ಸಣ್ಣ ಪ್ರಮಾಣದ ಚರಂಡಿಯ ಹೂಳು ತೆಗೆಯುವುದು ಈ ಪ್ರದೇಶದಲ್ಲಿ ಹೆಚ್ಚು ಕೈಗಾರಿಕೆಗೆ ಸಂಬಂಧಿಸಿದ ಬೃಹತ್ ಲಾರಿಗಳ ಓಡಾಟ ಇರುವುದರಿಂದ ರಸ್ತೆಯ ಡಾಂಬರಿಕರಣ ಪ್ರಮುಖವಾಗಿರುತ್ತದೆ.

ಈಗಾಗಲೇ ಕಾಮಗಾರಿಯು ಪ್ರಾರಂಭವಾಗಿದ್ದು ಹಳೆಯ ರಸ್ತೆಯ ಮಣ್ಣನ್ನು ಸಂಪೂರ್ಣ ತೆಗೆದು ಮಣ್ಣು ಆಧಾರಿತ ಅನುಗುಣವಾಗಿ ಬೇರೆ ಮಣ್ಣನ್ನು ಹಾಕಿ ಕಾಮಗಾರಿ ಟೆಂಡರ್ ನಿಯಾಮನುಸಾರ ಕಾಮಗಾರಿ ನಿರ್ವಹಿಸಲು ಮುಂದಾಗಿರುವುದು ಕಂಡುಬರುತ್ತದೆ. ಧೂಳು ಮಾಯಾವಾಗಿರುವ ರಸ್ತೆಗೆ ನೀರನ್ನು ಸಮರ್ಪಕವಾಗಿ ಹಾಕಬೇಕು ಇದರತ್ತ ಹೆಚ್ಚು ಗಮನ ಹರಿಸಿ ಸಾರ್ವಜನಿಕರಿಗೆ ತೊಂದರೆಗಳು ಅಗದಂತೆ ಕಾಮಗಾರಿಯನ್ನು ನಿರ್ವಹಿಸುವಂತೆ ಕೈಗಾರಿಕಾ ಪ್ರದೇಶದ ಸಾರ್ವಜನಿಕರ ಆಗ್ರಹವಾಗಿದೆ.