ತಾ. 22ರ ಜನತಾ ಕಫ್ರ್ಯೂಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ 5 ಗಂಟೆಗೆ ಜನತೆ ಅವರಿರುವ ಸ್ಥಳದಲ್ಲೇ ನಿಂತು ಕೊರೊನಾದಿಂದ ಭಾರತೀಯರನ್ನು ರಕ್ಷಿಸಲು ಪಣತೊಡುತ್ತಿರುವ ಸಹಸ್ರಾರು ಮಂದಿಗೆ ಕೃತಜ್ಞತೆ ಸಲ್ಲಿಸಲು ಮನವಿ ಮಾಡಿದ್ದರು. ಚಪ್ಪಾಳೆ ತಟ್ಟುವುದು, ಗಂಟೆ, ಜಾಗಟೆ ಬಾರಿಸುವ ಮೂಲಕ ಸೇವಾ ಕರ್ತರಿಗೆ ಕೃತಜ್ಞತೆ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಜಿಲ್ಲೆಯಲ್ಲೂ ಜನರಿಂದ ಕೃತಜ್ಞತಾ ಭಾವ ಕಂಡು ಬಂದಿತು. ಚಪ್ಪಾಳೆ, ಗಂಟೆ, ಶಂಖ ನಾದ, ಜಾಗಟೆ, ಧ್ವನಿಗಳ ಮೂಲಕ ನಮ್ಮ ರಕ್ಷಕರಿಗೆ ಗೌರವ ಹಾಗೂ ವಂದನೆ ಸಲ್ಲಿಸಿ ಅವರುಗಳ ಮನೋಸ್ಥೈರ್ಯ ಹೆಚ್ಚಿಸಿದರು.ಗೌಡ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆನ್ಯಾಯಾಧೀಶೆ ನೂರುನ್ನೀಸಾಕೊಡವ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯಮಾಜಿ ಶಾಸಕ ಎಸ್.ಜಿ. ಮೇದಪ್ಪ