ಮಡಿಕೇರಿ, ಮಾ. 22: ಮಡಿಕೇರಿಯಲ್ಲಿರುವ ಇ.ಸಿಹೆಚ್.ಎಸ್. ಪಾಲಿಕ್ಲಿನಿಕ್ ಏಪ್ರಿಲ್ 1ರಿಂದ ಹೊಸ ಬಡಾವಣೆಯಲ್ಲಿರುವ ಜನನಿ ಕ್ಲಿನಿಕ್ ಹತ್ತಿರ ಸ್ಥಳಾಂತರಗೊಳ್ಳಲಿದೆ. ಇದರ ಸಲುವಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ‘ಒಐಸಿ ಇಸಿಹೆಚ್‍ಎಸ್’ ಕರ್ನಲ್ ಪಿ.ಬಿ. ಅಯ್ಯಪ್ಪ ಅವರ ನೇತೃತ್ವದಲ್ಲಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಏ.1ರಿಂದ ಹೊಸ ಕಟ್ಟಡದಲ್ಲಿ ಇದು ಕಾರ್ಯನಿರ್ವಹಿಸಲಿದೆ ಎಂದು ಪಾಲಿಕ್ಲಿನಿಕ್‍ನ ಆಫೀಸರ್ ಇನ್‍ಚಾರ್ಜ್ ಕರ್ನಲ್ ಪಿ.ಬಿ. ಅಯ್ಯಪ್ಪ ಅವರು ತಿಳಿಸಿದ್ದಾರೆ.