ಮಡಿಕೇರಿ, ಮಾ. 22: ರಾಜ್ಯಾದ್ಯಂತ ತಾ. 27ರಿಂದ ಆರಂಭಗೊಳ್ಳಬೇಕಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ರಾಜ್ಯ ಶಿಕ್ಷಣ (ಮೊದಲ ಪುಟದಿಂದ) ಸಚಿವರಾದ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದೆ ಪರೀಕ್ಷೆಯ ದಿನಾಂಕ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಮಕ್ಕಳ ಸುಖ ಹಾಗೂ ಹಿತ ಸರಕಾರದ ಉದ್ದೇಶವಾಗಿದೆ. ಮಕ್ಕಳು ಈ ಬಗ್ಗೆ ಆತಂಕಪಡಬೇಕಾಗಿಲ್ಲ. ಪರೀಕ್ಷೆ ಎದುರಿಸಲು ಈಗಾಗಲೇ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳು ಈ ಮುಂದೂಡಿಕೆಯ ಅವಧಿಯನ್ನು ಮತ್ತೊಮ್ಮೆ ಸಿದ್ಧತೆಯ ಅವಧಿ ಎಂದು ಪರಿಗಣಿಸಿ ವಿದ್ಯಾರ್ಥಿಗಳು ಧೈರ್ಯದಿಂದಿರುವಂತೆ ಸಚಿವರು ಹೇಳಿದ್ದಾರೆ.ಇಂದಿನ ಪಿಯುಸಿ ಪರೀಕ್ಷೆ ಮುಂದೂಡಿಕೆ ರಾಜ್ಯದಲ್ಲಿ ತಾ. 23ರಂದು (ಇಂದು) ನಡೆಯಬೇಕಿದ್ದ ದ್ವಿತೀಯ ಪಿ.ಯು.ಸಿ.ಯ ಕೊನೆಯ ವಿಷಯದ ಪರೀಕ್ಷೆಯನ್ನೂ ಮುಂದೂಡಲಾಗಿದೆ.ಇದಕ್ಕಾಗಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗಿತ್ತಾದರೂ ಇದೀಗ ಈ ಪರೀಕ್ಷೆಯನ್ನೂ ಮುಂದೂಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.