ಶನಿವಾರಸಂತೆ, ಮಾ. 23: ಕೊಡ್ಲಿಪೇಟೆ ಹೋಬಳಿಯ ಚೆಂಬೆಬೆಳ್ಳೂರು ಗ್ರಾಮದ ಹೊಳೆಯಿಂದ ತಾ. 22ರ ರಾತ್ರಿ ಮರಳು ಕಳ್ಳಸಾಗಣೆ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆ ಶನಿವಾರಸಂತೆ ಪೊಲೀಸರು, ಸಿಬ್ಬಂದಿ ಸ್ಥಳಕ್ಕೆ ತೆರಳಿ ಟ್ರ್ಯಾಕ್ಟರ್ (ಕೆಎ-12, ಟಿ-4712) ಸಹಿತ ಚಾಲಕ ಬಿ.ಕೆ. ಮಂಜುನಾಥ್ ಹಾಗೂ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.