ವೀರಾಜಪೇಟೆ, ಮಾ. 23: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಇಂದು ವೀರಾಜಪೇಟೆ ಪಟ್ಟಣದಲ್ಲಿ ಭಾಗಶ: ಬಂದ್ ಆಗಿದ್ದು ಪಟ್ಟಣದಲ್ಲಿ ಆಯ್ದ ಜಿನಸಿ ಅಂಗಡಿಗಳು ಮೋರ್, ಮಾರ್ಜಿನ್ ವೀರಾಜಪೇಟೆ, ಮಾ. 23: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಇಂದು ವೀರಾಜಪೇಟೆ ಪಟ್ಟಣದಲ್ಲಿ ಭಾಗಶ: ಬಂದ್ ಆಗಿದ್ದು ಪಟ್ಟಣದಲ್ಲಿ ಆಯ್ದ ಜಿನಸಿ ಅಂಗಡಿಗಳು ಮೋರ್, ಮಾರ್ಜಿನ್ ತುರ್ತು ಸೇವೆಯ ಆಟೋ ರಿಕ್ಷಾಗಳು ಅಗತ್ಯ ಸೇವೆ ಸಲ್ಲಿಸಿದರೆ ಖಾಸಗಿ ಹಾಗೂ ಸಾರಿಗೆ ಸಂಸ್ಥೆ ಬಸ್ಸುಗಳು ಸಂಚರಿಸಲಿಲ್ಲ. ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಳಿಸಿದನ್ನು ಅರಿಯದ ಪ್ರಯಾಣಿಕರು ನಿನ್ನೆಯಿಂದಲೇ ಬಸ್‍ಗಳು ಎಷ್ಟು ಹೊತ್ತಿಗೆ ಹೊರಡುತ್ತದೆ ಎಂದು ಕಾದು ಕುಳಿತಿದ್ದರು. ಖಾಸಗಿ ಹಾಗೂ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಹೊರತು ಪಡಿಸಿದರೆ ಸಮುಚ್ಚಯ ನ್ಯಾಯಾಲ ಯಗಳು ಸೇರಿದಂತೆ ಎಲ್ಲ ಕಚೇರಿಗಳು ಬಾಗಿಲು ಮುಚ್ಚಿದ್ದವು.
ಕೊಡಗು ಕೇರಳವನ್ನು ಸಂಪರ್ಕಿಸುವ ಮಾಕುಟ್ಟ ಹಾಗೂ ಕುಟ್ಟದ ಎರಡು ಗೇಟ್‍ಗಳನ್ನು ಬಂದ್ ಮಾಡಿದ್ದರಿಂದ ಕೊಡಗು ಕೇರಳದ ಸಂಪರ್ಕವನ್ನು ಕಳೆದು ಕೊಂಡಂತಾ ಗಿದ್ದು ಇದರಿಂದ ಇಲ್ಲಿನ ಪಟ್ಟಣ ಪಂಚಾಯಿತಿಯ ಮತ್ಸ್ಯ ಭವನವನ್ನು ಬಂದ್ ಮಾಡಲಾಗಿತ್ತು. ದ್ವಿ ಚಕ್ರದ ಮೂಲಕ ಕೇರಳಕ್ಕೆ ಹೋಗುವವರನ್ನು ಗೇಟ್‍ನಲ್ಲಿ ತಡೆದ ಪೊಲೀಸರು ಹಿಂದಕ್ಕೆ ಕಳಿಸಿದರು.
(ಮೊದಲ ಪುಟದಿಂದ) ವೀರಾಜಪೇಟೆ ಪಟ್ಟಣದ ಮದ್ಯ ಮಾರಾಟದ ಬಾರ್ ಹಾಗೂ ಅಂಗಡಿಗಳಿಗೆ ಇಲಾಖೆಯಿಂದ ಬೀಗಕ್ಕೆ ಮೊಹರು ಮಾಡಿದ್ದರಿಂದ ಮದ್ಯಕ್ಕಾಗಿ ಆಸಕ್ತರು ಪರದಾಡುವಂತಾಯಿತು. ಪಟ್ಟಣದಲ್ಲಿ ಕುರಿ, ಕೋಳಿ, ಹಂದಿ ಮಾಂಸದ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದೇಶದಿಂದ ಬಂದ ಸಂಖ್ಯೆ ಸ್ಥಳೀಯರು ಹಿಂತಿರುಗಿದವರೂ ಸೇರಿ 38ಕ್ಕೆ ಏರಿದ್ದು ಎಲ್ಲರೂ ಮನೆಯಲ್ಲಿಯೇ ನಿಗಾ ಘಟಕದ ಕೊಠಡಿಯಲ್ಲಿ ಇರುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.
ಕೇರಳ ರಾಜ್ಯದವರು ಕೊಡಗನ್ನು ಸಂಪರ್ಕಿಸದಂತೆ ಗಡಿಗಳ ಗೇಟ್‍ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊರೊನಾ ವೈರಸ್‍ನ ಮುಂಜಾಗರೂಕತೆಯನ್ನು ಜನರು ಸ್ವಯಂ ಪ್ರೇರಿತವಾಗಿ ಬೆಂಬಲಿಸಿದ್ದಾರೆ ಎಂದು ಡಿವೈಎಸ್‍ಪಿ ಸಿ.ಟಿ.ಜಯಕುಮಾರ್ ತಿಳಿಸಿದರು. -ವರದಿ : ಡಿಎಂಆರ್‍ವೀರಾಜಪೇಟೆಯಲ್ಲಿ ಭಾಗಶಃ ಬಂದ್