ನಾಪೆÇೀಕ್ಲು, ಮಾ. 22: ನಾಪೆÇೀಕ್ಲು ಪಟ್ಟಣ ಸುತ್ತಮುತ್ತ ಭಾನುವಾರ 3 ಗಂಟೆ ಸುಮಾರಿಗೆ ಸುರಿದ 75 ಸೆಂಟು ಮಳೆಯಿಂದ ಕಾದ ಭೂಮಿ ಸ್ವಲ್ಪ ಮಟ್ಟಿಗೆ ತಂಪಾದಂತಾಗಿದೆ. ಈ ವ್ಯಾಪ್ತಿಯಲ್ಲಿ ಕಾಫಿ ಹೂ ಅರಳಲು ಸೂಕ್ತ ಮಳೆ ಸಿಗದ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ಚಿಂತಾ ಕ್ರಾಂತರಾಗಿದ್ದರು. ಕೃತಕ ನೀರು ಹಾಯಿಸುವವರು ಕಾಫಿ ಗಿಡಗಳಿಗೆ ನೀರು ಹಾಯಿಸಿ ಕಾಫಿ ಹೂ ಅರಳಿಸಿದ್ದರು. ಆದರೆ ನೀರಿನ ವ್ಯವಸ್ಥೆಯಿಲ್ಲದ ಬೆಳೆಗಾರರು ಮಳೆಯನ್ನೇ ನಂಬಿದ್ದರು. ಇಂದು ಸುರಿದ ಮಳೆಯಿಂದ ಅವರು ಸ್ವಲ್ಪ ಮಟ್ಟಿಗೆ ಸಂತಸಗೊಂಡಿದ್ದಾರೆ.