ವೀರಾಜಪೇಟೆ, ಮಾ. 22: ದೇಶದ ಹಲವು ರಾಜ್ಯಗಳಲ್ಲಿ ಪಸರಿಸುತ್ತಿರುವ ಕೊರೊನಾ ವೈರಸ್ ಬಗ್ಗೆ ಜಿಲ್ಲಾಡಳಿತವು ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಗಡಿ ಭಾಗದಲ್ಲಿ ತಪಾಸಕರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಜಿಲ್ಲಾ ಜಾತ್ಯತೀತ ಜನತಾ ದಳದ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಆರೋಪಿಸಿದ್ದಾರೆ. ಪೆರುಂಬಾಡಿಯಲ್ಲಿನ ಗಡಿ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕೊರೊನಾ ವೈರಸ್ ಸಂಬಂಧ ವ್ಯಕ್ತಿಗಳನ್ನು ತಪಾಸಣೆ ಮಾಡುವ ಆರೋಗ್ಯ ಸಹಾಯಕರು ಮಾಸ್ಕ್ ಧರಿಸದೇ ಕೈಗೆ ರಕ್ಷಾ ಕವಚ ಇಲ್ಲದೇ ಪ್ರಯಾಣಿಕರನ್ನು ತಾಪಾಸಣೆಗೆ ಒಳಪಡಿಸುತ್ತಿರುವುದು ಕಂಡು ಬಂದಿದ್ದು, ತಪಾಸಕರಿಗೆ ಸೂಕ್ತ ರೀತಿಯಲ್ಲಿ ಭದ್ರತೆ ಒದಗಿಸುವಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಜೆ.ಡಿ.ಎಸ್ ಜಿಲ್ಲಾ ಕಾರ್ಯದರ್ಶಿ ಸುನೀಲ್, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಎಂ.ಎ., ವೀರಾಜಪೇಟೆ ನಗರ ಜೆ.ಡಿ.ಎಸ್. ಅಧ್ಯಕ್ಷ ಮಂಜುನಾಥ್ ಪಿ.ಎ., ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಮತೀನ್ ಹಾಜರಿದ್ದರು.