ಮಡಿಕೇರಿ, ಮಾ. 22: ಮಡಿಕೇರಿಯಲ್ಲಿರುವ ಕೊಡಗು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ನ ಆಡಳಿತ ಮಂಡಳಿಗೆ 2020-25ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಮಂಡುವಂಡ ಪಿ. ಮುತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಮಂದನೆರವಂಡ ಜಿ. ಉಷಾ (ಅಂಜಪರವಂಡ ಉಷಾ ಉತ್ತಯ್ಯ) ಅವರುಗಳು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. ನಿರ್ದೇಶಕರುಗಳಾಗಿ ಚೋವಂಡ ಡಿ. ಕಾಳಪ್ಪ, ಆಲೆಮಾಡ ಕೆ. ಕಾರ್ಯಪ್ಪ, ಮಣವಟ್ಟೀರ ಬಿ. ಮಾಚಯ್ಯ, ನಾಟೋಳಂಡ ಡಿ. ಚರ್ಮಣ, ಪಟ್ಟಡ ಎ. ಕರುಂಬಯ್ಯ, ಕೊಂಗಾಂಡ ಎ. ತಿಮ್ಮಯ್ಯ, ಕೇಕಡ ಯಂ. ಸುಗುಣ, ಕುಡುವಂಡ ಬಿ. ಉತ್ತಪ್ಪ, ನಂದೇಟಿರ ರಾಜಾ ಮಾದಪ್ಪ, ಶಾಂತೆಯಂಡ ಟಿ. ದೇವರಾಜ್ ಮತ್ತು ಚೊಟ್ಟೆಯಾಂಡ ಮಾಡ ಬೇಬಿ ಪೂವಯ್ಯ ಅವರುಗಳು ನೇಮಕ ಗೊಂಡಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಹಿರಿಯ ಲೆಕ್ಕಪರಿಶೋಧಕ ಸಿ.ಕೆ. ಸುರೇಶ್ ಅವರು ನಡೆಸಿಕೊಟ್ಟಿರುವುದಾಗಿ ವ್ಯವಸ್ಥಾಪಕಿ ಚೋಂದಮ್ಮ ತಿಳಿಸಿದ್ದಾರೆ.