ಸುಂಟಿಕೊಪ್ಪ, ಮಾ. 23: ನೆಹರು ಯುವ ಕೇಂದ್ರ ಮಡಿಕೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಶನ್ ಬೋಯಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಜಲಶಕ್ತಿ ಅಭಿಯಾನದಡಿ ನೀರಿನ ನಿರ್ವಹಣೆ, ಶ್ರಮದಾನ ಹಾಗೂ ಜಾಗೃತಿ ಶಿಬಿರವನ್ನು ನಡೆಸಲಾಯಿತು.

ಬೋಯಿಕೇರಿ-ಇಬ್ನಿವಾಳವಾಡಿ ಗ್ರಾಮದ ಸಮುದಾಯ ಭವನದಲ್ಲಿ ಜಲ ಅಭಿಯಾನ ಮಾಹಿತಿ ಕಾರ್ಯಾಗಾರ ಸಮಾರಂಭವನ್ನು ಡಾ. ನಂದಿನೆರವಂಡ ವಿ. ಪ್ರಕಾಶ್ ಉದ್ಘಾಟಿಸಿದರು. ಜಾಗೃತಿ ಅಭಿಯಾನ, ಭಿತ್ತಿಪತ್ರ ವಿತರಣೆ ಹಾಗೂ ಮಾಹಿತಿಯನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಪಾಟೀಲ್ ನೀಡಿದರು.

ಬೋಯಿಕೇರಿ ವೀಣಾ ಕಾಫಿ ತೋಟದ ಬಳಿ ಇರುವ ಗ್ರಾವಿಟಿ ವಾಟರ್ ಟ್ಯಾಂಕ್‍ನ ಬಳಿ ಶ್ರಮದಾನ ನಡೆಸಲಾಯಿತು. ನೆಹರು ಯುವ ಕೇಂದ್ರ ಮಡಿಕೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಶನ್ ಬೋಯಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸದಸ್ಯರಿಗೆ ಪ್ರಮಾಣ ಪತ್ರ ನೀಡಲಾಯಿತು.

ವೇದಿಕೆಯಲ್ಲಿ ಬೋಯಿಕೇರಿಯ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಲೋಕಯ್ಯ, ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಶನ್ ಅಧ್ಯಕ್ಷ ಪಿ.ಸಿ. ಕೃಷ್ಣಪ್ಪ, ಕಾರ್ಯದರ್ಶಿ ದಿನೇಶ್ ಹಾಗೂ ಸದಸ್ಯರು ಇದ್ದರು.