ಕುಶಾಲನಗರ, ಮಾ. 22: ಕುಶಾಲನಗರದ ರಿಜಿಡ್ ಗ್ರೂಪ್ ವತಿಯಿಂದ ಕೊರೊನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡು ಸದಸ್ಯರು ಸೂಚನಾ ಫಲಕಗಳನ್ನು ಹಿಡಿದು ರಥ ಬೀದಿ ಮೂಲಕ ಜಾಥಾ ತೆರಳಿ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಜಾಗೃತಿ ಮೂಡಿಸಿದರು. ನಂತರ ಕಾರ್ಯಪ್ಪ ವೃತ್ತದಲ್ಲಿ ಕೆಲ ನಿಮಿಷಗಳು ನಿಂತು ಕೊರೊನಾ ವೈರಸ್ ಪಿಡುಗಿನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಜಾಥಾದಲ್ಲಿ ಗ್ರೂಪ್ ಸದಸ್ಯರಾದ ಚಿತ್ರ ರಮೇಶ್,ಎನ್.ವಿ. ಬಾಬು, ಎಸ್.ಎಂ. ನಾಗೇಂದ್ರ, ವಿ.ಆರ್. ಮಂಜುನಾಥ್, ಬಿ.ಎನ್. ರಾಘವೇಂದ್ರ, ವತ್ಸಲ ಶ್ರೀನಿವಾಸ್, ಶಾಲಿನಿ ನಾಗೇಶ್, ಚಿತ್ರ ರಮೇಶ್, ಕನ್ನಿಕಾನಾಗ್, ಕೆ.ಎಸ್. ನಾಗೇಶ್, ಜಯಶ್ರೀ ಕುಮಾರ್ ಮುಂತಾದವರು ಭಾಗವಹಿಸಿದ್ದರು.