ಮಡಿಕೇರಿ, ಮಾ. 21: ದೇಶಾದ್ಯಂತ ತಾ. 22ರಂದು (ಇಂದು) ನಡೆಯಲಿರುವ ಜನತಾ ಕಫ್ರ್ಯೂಗೆ ಜಿಲ್ಲಾ ಸವಿತಾ ಸಮಾಜ ಹಾಗೂ ಮಡಿಕೇರಿ ಸವಿತಾ ಸಮಾಜದ ವತಿಯಿಂದ ಬೆಂಬಲ ಸೂಚಿಸಿ ಎಲ್ಲಾ ಸಲೂನ್‍ಗಳನ್ನು ಮುಚ್ಚಿ ಬಂದ್ ಮಾಡಲಾಗುವುದು.
ಜೊತೆಗೆ ಕೊಡಗು ಜಿಲ್ಲೆಯಾದ್ಯಂತ ತಾ. 22ರಿಂದ 24ರವರೆಗೆ ಬೆಂಬಲ ಸೂಚಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚಬೇಕೆಂಬ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ಧಾರಕ್ಕೆ ಬೆಂಬಲ ನೀಡುವುದಾಗಿ ಕೊಡಗು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೆ.ಎಸ್. ದೊರೇಶ್ ಹಾಗೂ ಮಡಿಕೇರಿ ಸವಿತಾ ಸಮಾಜ ಅಧ್ಯಕ್ಷ ಎಂ.ಟಿ. ಮಧು ತಿಳಿಸಿದ್ದಾರೆ.