ಮಡಿಕೇರಿ, ಮಾ. 21: ಟಾಟಾ ಸಂಸ್ಥೆಗೆ ಸೇರಿದ ಕೋವರ್‍ಕೊಲ್ಲಿ ತೋಟದ ಶ್ರೀ ವನದುರ್ಗಿ ದೇವಿಯ ವಾರ್ಷಿಕೋತ್ಸವ ತಾ. 27ರಂದು ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಗಣಹೋಮ, 9 ಗಂಟೆಗೆ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಕ್ರೀಡಾಕೂಟ, 12.30ಕ್ಕೆ ಮಹಾಪೂಜೆ, 1.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಅಲಂಕೃತ ಮಂಟಪದಲ್ಲಿ ದೇವಿಯ ಮೆರವಣಿಗೆ ನಡೆಯಲಿದೆ ಎಂದು ಸಂಸ್ಥೆಯ ಕ್ಷೇತ್ರಾಧಿಕಾರಿ ಚಂಗುಲಂಡ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.