ಮಡಿಕೇರಿ, ಮಾ. 21: 2019-20ನೇ ಸಾಲಿನ ಚಿತ್ರದುರ್ಗದ ಚಿಂತನ ಪ್ರಕಾಶನ ವತಿಯಿಂದ ನಡೆದ ಕನ್ನಡ ಪರೀಕ್ಷೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಳಿಬೀಡು ಇಲ್ಲಿನ 51 ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ದರ್ಜೆ ಪಡೆದಿದ್ದಾರೆ.

ಇವರ ಪೈಕಿ 7ನೇ ತರಗತಿಯ ಕೆ.ಪಿ. ಶ್ರೇಯ ರಾಜ್ಯ ರ್ಯಾಂಕ್, 6ನೇ ತರಗತಿಯ ಹೆಚ್.ಆರ್. ಗಗನ್ ಜಿಲ್ಲಾ ರ್ಯಾಂಕ್, 5ನೇ ತರಗತಿಯ ಕೆ.ಪಿ. ಶ್ರಾವ್ಯ ಜಿಲ್ಲಾ ರ್ಯಾಂಕ್, ಕೆ.ಎಂ. ನೂತನ್ ಕುಮಾರಿ ತಾಲೂಕು ರ್ಯಾಂಕ್ ಮತ್ತು ಕೆ.ಪಿ. ಮೋಹಿತ್ ತಾಲೂಕು ರ್ಯಾಂಕ್ ಗಳಿಸಿದ್ದಾರೆ.

ಸಂಘಟನಾ ಶಿಕ್ಷಕಿಯಾಗಿ ಗ್ರೆಟ್ಟಾ ಮೋನಿಸ್ ಹಾಗೂ ಮುಖ್ಯೋಪಾಧ್ಯಾಯಿನಿ ದಮಯಂತಿ ಪ್ರೋತ್ಸಾಹಿಸಿದ್ದಾರೆ.