ಮಡಿಕೇರಿ, ಮಾ. 21: ಮಂಗಳೂರಿನಿಂದ ಬೆಂಗಳೂರಿಗೆ ಸಾಗಾಟಗೊಳಿಸುತ್ತಿದ್ದ ಅಂದಾಜು 3 ಟನ್ ಜೀವಂತ ಕ್ಯಾಟ್ಫಿಶ್ಗಳನ್ನು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಪತ್ತೆಹಚ್ಚಿ, ಲಾರಿ ಸಹಿತ ಮೀನುಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.ಮಡಿಕೇರಿ, ಮಾ. 21: ಮಂಗಳೂರಿನಿಂದ ಬೆಂಗಳೂರಿಗೆ ಸಾಗಾಟಗೊಳಿಸುತ್ತಿದ್ದ ಅಂದಾಜು 3 ಟನ್ ಜೀವಂತ ಕ್ಯಾಟ್ಫಿಶ್ಗಳನ್ನು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಪತ್ತೆಹಚ್ಚಿ, ಲಾರಿ ಸಹಿತ ಮೀನುಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.ಸೋಮಲಾಲ್ ಹಾಗೂ ಚಿಕ್ಕಬಳ್ಳಾಪುರದ ಅಂಜಪ್ಪನನ್ನು ವಿಚಾರಿಸಿದಾಗ, ಈ ಕ್ಯಾಟ್ಫಿಶ್ಗಳನ್ನು ಹಾಸನದ ಕೃಷ್ಣಪ್ಪ ಹಾಗೂ ರಾಜು ಸಲಹೆಯಂತೆ ಮಂಗಳೂರಿನಲ್ಲಿ ಸಂಗ್ರಹಿಸಿ ಬೆಂಗಳೂರಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಸುಳಿವು ನೀಡಿದ್ದಾರೆ.
ಕ್ಯಾನ್ಸರ್ನಂತ ಮಹಾರೋಗ ಹರಡುವ ಈ ಕ್ಯಾಟ್ಫಿಶ್ ಸೇವನೆಯನ್ನು ಸರಕಾರ ನಿಷೇಧಿಸಿದ್ದರೂ, ಅಕ್ರಮವಾಗಿ ಹೊಟೇಲ್ ಉದ್ಯಮಗಳಲ್ಲಿ ಬಳಕೆಗೆ ಮತ್ತು ಗ್ರಾಹಕರಿಗೆ ವಂಚಿಸುವ ದಂಧೆಕೋರರು ಮೀನು ಮಾರಾಟದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ವಶಕ್ಕೆ ಪಡೆದಿರುವ ಲಾರಿ ಕೋಲಾರ ಜಿಲ್ಲೆ ಚಿಂತಾಮಣಿಯ ನಿವಾಸಿ ವಾಜಿದ್ ಎಂಬ ವ್ಯಕ್ತಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
ಮೀನುಗಾರಿಕೆ ಇಲಾಖೆ ವಶ: ಈ ಅಕ್ರಮ ದಂಧೆ
(ಮೊದಲ ಪುಟದಿಂದ) ವಿರುದ್ಧ ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸುವುದರೊಂದಿಗೆ, ಮೀನುಗಾರಿಕೆ ಇಲಾಖೆಯ ವಶಕ್ಕೆ ಮೀನುಗಳನ್ನು ಹಸ್ತಾಂತರಿಸಲಾಗಿದೆ. ಇಲಾಖೆ ಅಧಿಕಾರಿ ಕೆ.ಟಿ. ದರ್ಶನ್ ಪ್ರಕಾರ, ಇದು ಆಫ್ರಿಕನ್ ಕ್ಯಾಟ್ಫಿಶ್ ಆಗಿದ್ದು, ಜಿಲ್ಲಾಧಿಕಾರಿಗಳ ಸಮ್ಮತಿ ಬಳಿಕ ತಹಶೀಲ್ದಾರ್ ಸಮ್ಮುಖ ಮೀನುಗಳನ್ನು ನಾಶಪಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಈ ಮೀನುಗಳನ್ನು ದಂಧೆಕೋರರಿಂದ ರೂ. 50ರಿಂದ 60ರಂತೆ ಕೆ.ಜಿ.ಯೊಂದಕ್ಕೆ ಖರೀದಿಸಿ, ಬೆಂಗಳೂರು ಮತ್ತಿತರೆಡೆಗಳಲ್ಲಿ ದುಬಾರಿ ಬೆಲೆಗೆ ಮಾರಾಟಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಸುಮನ್ ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಡಿಸಿಐಜಿಯ ಪ್ರಭಾರ ಇನ್ಸ್ಪೆಕ್ಟರ್ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿಗಳಾದ ಕೆ.ವೈ. ಹಮೀದ್, ಕೆ.ಎಸ್. ಅನಿಲ್ಕುಮಾರ್, ವಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಎಂ.ಎನ್.ನಿರಂಜನ್, ಬಿ.ಜೆ. ಶರತ್ ರೈ ಹಾಗೂ ಚಾಲಕ ಕೆ.ಎಸ್. ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.