ಶ್ರೀ ರಾಮ-ರಾವಣರ ನಡುವೆ ಸಮರ ಪ್ರಾರಂಭವಾಗುತ್ತದೆ. ಮರ್ಯಾದಾ ಪುರುಷೋತ್ತಮನೆನಿಸಿದ ಅವತಾರ ಪುರುಷ ಶ್ರೀರಾಮನಿಗೂ ಲೋಕಕಂಟಕನಾದ ರಾವಣನಿಗೂ ಧರ್ಮಾಧರ್ಮಗಳ ನಡುವಿನ ಘೋರ ಸಂಗ್ರಾಮ ಏರ್ಪಡುತ್ತದೆ.

ಘನಘೋರ ಯುದ್ಧದ ನಡುವೆ ವಿಶ್ರಾಂತಿ ತೆಗೆದುಕೊಳ್ಳಲೆಂದು ರಾವಣನು ಯುದ್ಧ ಭೂಮಿಯಿಂದ ಅನತಿ ದೂರದ ಪ್ರದೇಶಕ್ಕೆ ತೆರಳಿದನು. ಆ ಸಂದರ್ಭವನ್ನು ಗಮನಿಸಿದ, ಯುದ್ಧವನ್ನು ನೋಡಲೆಂದು ದೇವತೆಗಳೊಡನೆ ಆಗಮಿಸಿದ್ದ ಪೂಜ್ಯರಾದ ಅಗಸ್ತ್ಯ ಮಹರ್ಷಿಗಳು ಶ್ರೀರಾಮನ ಬಳಿಗೆ ಬಂದು ಹೇಳಿದರು: “ಮಹಾಬಾಹುವೇ, ರಾಮ, ಸನಾತನವಾದ “ಆದಿತ್ಯ ಹೃದಯ” ವೆಂಬ ಮಂತ್ರವಿದೆ. ಈ ರಹಸ್ಯ ಮಂತ್ರವು ಸೂರ್ಯದೇವನನ್ನು ಪೂರ್ಣ ಪ್ರಸನ್ನಗೊಳಿಸಬಲ್ಲುದು. ಈ ಮಹಾ ಮಂತ್ರವು ಸಮಸ್ತ ಶತ್ರುಗಳನ್ನೂ ವಿನಾಶಗೊಳಿಸುವ ಸಾಮಥ್ರ್ಯ ಹೊಂದಿದೆ. ಇದನ್ನು ಅನುದಿನವೂ ಜಪಿಸಬೇಕು. ಇದರಿಂದ ಜಯ ಪ್ರಾಪ್ತಿಯಾಗುತ್ತದೆ. ಅಕ್ಷಯ ಫಲ ನೀಡುತ್ತದೆ. ಸಮಸ್ತ ಕಾರ್ಯಗಳಿಗೂ ಮಂಗಳವುಂಟುಮಾಡುತ್ತದೆ. ಸರ್ವ ಪಾಪಗಳನ್ನೂ ವಿನಾಶಗೊಳಿಸುತ್ತದೆ. ಚಿಂತೆ ಮತ್ತು ಶೋಕವನ್ನು ನಾಶಪಡಿಸುತ್ತದೆ. ಆಯುಷ್ಯವನ್ನೂ ವೃದ್ಧಿಸುತ್ತದೆ ಎಂದರು. ಶ್ರೀ ರಾಮನಿಗೆ “ಆದಿತ್ಯ ಹೃದಯ”ವನ್ನು ಈ ಕೆಳಗಿನಂತೆ ಉಪದೇಶಿಸಿದರು.ಯುವ ವರುಣನ ಗೆಳೆಯನಾದ ವಿಂಧ್ಯ ಪರ್ವತವನ್ನು ಹಾದು ಹೋಗುವ ಆದಿತ್ಯನು ಪೂಜ್ಯನಾಗಿದ್ದಾನೆ.

ಬಿಸಿಲನ್ನುಂಟುಮಾಡುವ, ಸೂರ್ಯ ಮಂಡಲಕ್ಕೆ ಒಡೆಯನೂ, ಕತ್ತಲೆಗೆ (ರಾತ್ರಿಗೆ) ಮೃತ್ಯು ರೂಪನೂ, ಸಕಲವನ್ನೂ ದಹಿಸುವವನೂ ಸರ್ವ ಸೃಷ್ಟಿಕರ್ತನೂ, ತೇಜಶ್ಶಾಲಿಯೂ, ಎಲ್ಲಾ ಕಡೆ ವ್ಯಾಪ್ತನೂ ಆದ ಆದಿತ್ಯನು ಬೆಳಗುವನು.

ಗಗನದಲ್ಲಿ ಬೆಳಗುವ ಆಕಾಶ ತಾರೆಗಳಿಗೆ ಸ್ವಾಮಿಯೂ, ವಿಶ್ವ ವಂದಿತನೂ, ತೇಜಸ್ಸುಳ್ಳ ವರಲ್ಲೆಲ್ಲ ಪ್ರಕಾಶ ಮಾನನೂ ದ್ವಾದಶ (12) ರೂಪಗಳುಳ್ಳವನಾದ ಆದಿತ್ಯನಿಗೆ ನಮಸ್ಕಾರಗಳು.

ಪೂರ್ವದಲ್ಲಿ ಉದಿಸಿ, ಪಶ್ಚಿಮದಲ್ಲಿ ಅಸ್ತಮಿಸುವ ಪ್ರಕಾಶಮಾನ ವಸ್ತುಗಳ ಯಜಮಾನನಾದ ಹಗಲಿನ ಒಡೆಯನಿಗೆ ನಮಸ್ಕಾರಗಳು.

ಜನಪ್ರದನೂ, ಹಸಿರು ವರ್ಣದ ಅಶ್ವಾರೋಹಿಯ ಸಹಸ್ರ ಕಿರಣನೂ, ಆಕರ್ಷಣ ಶಕ್ತಿಯುಳ್ಳವನೂ ಆದ ಆದಿತ್ಯನಿಗೆ ನಮಸ್ಕಾರಗಳು.

ಉಗ್ರರೂಪಿಯೂ, ಭೂಮಿಯ ಸಾರವನ್ನು ಹೀರಿಕೊಡುವಾತನೂ, ಕಮಲಗಳನ್ನು ಅರಳಿಸುವ ಬೆಳಕಿನ ಉಂಡೆಯಾದ ಮಾರ್ತಾಂಡನಿಗೆ ನಮಸ್ಕಾರಗಳು.

ಬ್ರಹ್ಮ-ಶಿವ, ವಿಷ್ಣು ದೇವತೆಗಳಿಗೆ ಪ್ರಭುವಾದ ಸೂರ್ಯನು ಸಕಲವನ್ನೂ ಕಬಳಿಸಬಲ್ಲ ಶಕ್ತಿಶಾಲಿಯಾಗಿದ್ದಾನೆ. ರೌದ್ರರೂಪನಾದ ಆದಿತ್ಯನಿಗೆ ನಮಸ್ಕಾರ.

ಕತ್ತಲೆಯನ್ನು ನಾಶಗೊಳಿಸುವ, ಹಿಮವನ್ನು ಕರಗಿಸುವ ಅನಂತ ಶಕ್ತಿಯುಳ್ಳವನೂ, ಪಾಪಿಗಳ ನಾಶಕನೂ, ಬೆಳಕಿನ ವಸ್ತುಗಳ ಒಡೆಯನಿಗೆ ನಮಸ್ಕಾರಗಳು.

ಪುಟಕ್ಕೆ ಹಾಕಿದ ಚಿನ್ನದಂತೆ ತೋರುವ, ಜಗತ್ತಿನ ಕರ್ಮಸಾಕ್ಷಿ ಯಾದ, ಕತ್ತಲೆಯನ್ನು ಕಳೆಯುವ ರವಿಗೆ ನಮನಗಳು.

ಈ ಸೂರ್ಯನು ಪ್ರಾಣಿಗಳನ್ನೂ ನಾಶಮಾಡಿ ಮತ್ತೆ ಸೃಜಿಸುವನು. ಆದಿತ್ಯನು ಜಗತ್ತನ್ನು ಸಲಹಿ, ತಾಪ ಗೋಳಿಸಿ ಮಳೆಗರೆಸಿ ತನ್ನ ಕಿರಣಗಳಿಂದ ರಕ್ಷಿಸುವನು.

ಆದಿತ್ಯನು ಮಲಗಿದವರನ್ನು ಎಚ್ಚರಗೊಳಿಸಿ ಸಕಲ ಪ್ರಾಣಿಗಳಿಗೆ ಚೈತನ್ಯಶಕ್ತಿ ನೀಡಿ ಯಜ್ಞರೂಪ ಹಾಗೂ ಯಜ್ಞಫಲವನ್ನು ನೀಡುವವನಾಗಿದ್ದಾನೆ.

ಸ್ವಾಮಿಯಾದ ರವಿಯು ವೇದ, ಯಜ್ಞಗಳ ಫಲರೂಪನಾಗಿ ಎಲ್ಲ ಕೆಲಸಗಳನ್ನೂ ಮಾಡಿಸುತ್ತಾನೆ.

ಅಗಸ್ತ್ಯರು ಹೇಳುತ್ತಾರೆ : ಹೇ ರಾಘವ ! ಸೂರ್ಯದೇವನನ್ನು ಆಪತ್ತಿನ ಕಾಲದಲ್ಲಿ ತೊಂದರೆ ಬಂದಾಗ, ಕಾಡಿನಲ್ಲಿ ಭಯ ವಾದಾಗ ಈ ಮೇಲಿನಂತೆ ಸ್ತೋತ್ರ ಮಾಡಿದವರು ತೊಂದರೆಗೆ ಸಿಲುಕುವದಿಲ್ಲ.

ದೇವದೇವನೂ, ಜಗದೀಶನೂ ಆದ ಸೂರ್ಯನನ್ನು ಪೂಜಿಸಿ ಏಕಾಗ್ರತೆಯಿಂದ ಈ ಸ್ತೋತ್ರವನ್ನು ಮೂರು ಬಾರಿ ಜಪಿಸಿ ದರೆ ನೀನು ಯುದ್ಧದಲ್ಲಿ ಗೆಲ್ಲುವುದು ಖಚಿತವಾಗಿದೆ.

‘‘ಹೇ ಮಹಾವೀರನೆ, ರಾವಣನನ್ನು ಈಗಲೇ ನೀನು ಸಂಹರಿಸುವೆ’’ ಎಂದು ನುಡಿದ ಅಗಸ್ತ್ಯರು ತಾವು ಬಂದಂತೆ ಹೊರಟು ಹೋದರು.

ಇದನ್ನು ಆಲಿಸಿದ ತೇಜಸ್ವಿಯಾದ ಶ್ರೀ ರಾಮಚಂದ್ರನು, ಚಿಂತೆಯಿಲ್ಲದವನಾಗಿ ಹರ್ಷದಿಂದ ಅದನ್ನು ಮನಸ್ಸಿನಲ್ಲಿ ನೆಲೆಗೊಳಿಸಿದನು.

ಶ್ರೀರಾಮನು ಶುಚಿರ್ಭೂತನಾಗಿ ಮೂರು ಬಾರಿ ಆಚಮನ ಮಾಡಿ, ಆದಿತ್ಯನನ್ನು ಕುರಿತು ಸ್ತೋತ್ರ ಜಪಿಸಿ, ಧನುಸ್ಸನ್ನು ಕೈಗೆತ್ತಿಕೊಂಡು ಹರ್ಷಚಿತ್ತನಾದನು. ಬಳಿಕ ರಾಮನು ತನ್ನೆಡೆಗೆ ಯುದ್ಧಕ್ಕಾಗಿ ಮತ್ತೆ ಬಂದ ರಾವಣನನ್ನು ನೋಡಿ ಅವನನ್ನು ಸಂಹರಿಸಲು ನಿರ್ಧರಿಸಿದನು.

ಆಗ ಸೂರ್ಯದೇವನು ದೇವತೆಗಳೊಂದಿಗೆ ಪ್ರತ್ಯಕ್ಷನಾಗಿ ಶ್ರೀರಾಮನನ್ನು ನೋಡಿ (“ತ್ವರ”) ಬೇಗನೆ ಸಂಹರಿಸು ಎಂದು ಹೇಳಿ ಹರಸಿದನು.

(ಆಧಾರ: ಬೆಂಗಳೂರು ಭಾರತ ದರ್ಶನ ಪ್ರಕಾಶನದ “ವಾಲ್ಮೀಕಿ ರಾಮಾಯಣ”, ಮೈಸೂರು ಡಿ.ವಿ.ಕೆ ಮೂರ್ತಿ ಪ್ರಕಾಶನದ “ಕನ್ನಡ ವಾಲ್ಮೀಕಿ ರಾಮಾಯಣ”, ಬೆಂಗಳೂರು ಮೆಸರ್ಸ್ ಟಿ.ನಾರಾಯಣ ಅಯ್ಯಂಗಾರ್ ಪ್ರಕಾಶನದ “ಆದಿತ್ಯ ಹೃದಯಂ” ಗ್ರಂಥಗಳ ಕೃಪೆ) ನಿತ್ಯವೂ ಈ ಸ್ತೋತ್ರವನ್ನು ಸೂರ್ಯಾಭಿಮುಖವಾಗಿ ನಿಂತು ಸರ್ವರೂ ಪಠಿಸಬಹುದು. ಏಕೆಂದರೆ, ಮಾನವನು ದೇವರನ್ನು ವಿಗ್ರಹ ರೂಪದಲ್ಲಿ ನಂಬುತ್ತಾನೆ. ಆದರೆ, ನಿತ್ಯವೂ ನಮ್ಮ ಬಾಳಿನಲ್ಲಿ ಬೆಳಕು ನೀಡುವ ಸ್ವಯಂಪ್ರಕಾಶಿತನಾದ ಸೂರ್ಯನನ್ನು ಪ್ರತ್ಯಕ್ಷ ದೈವವಾಗಿ ನೋಡಬಹುದು. ಆತನನ್ನು ಸ್ತುತಿಸುವದರಿಂದ ನಮ್ಮ ಆತ್ಮ ಚೈತನ್ಯ ಇಮ್ಮಡಿಯಾಗುತ್ತದೆ. ಅಗಸ್ತ್ಯರು ಸಾಕ್ಷಾತ್ ಶ್ರೀರಾಮನಿಗೆ ಇದನ್ನು ಯುದ್ಧ ಭೂಮಿಯಲ್ಲಿ ಬೋಧಿಸುತ್ತಾರೆ. ನಿತ್ಯವೂ ಬೆಳಗಿನ ಜಾವ ನಾವು ಈ ಸ್ತೋತ್ರವನ್ನು ಒಮ್ಮೆ ಪಠಿಸಬಹುದು. ನಮ್ಮ ಕೆಲಸ ದೈವವಾಗಿ ನೋಡಬಹುದು. ಆತನನ್ನು ಸ್ತುತಿಸುವದರಿಂದ ನಮ್ಮ ಆತ್ಮ ಚೈತನ್ಯ ಇಮ್ಮಡಿಯಾಗುತ್ತದೆ. ಅಗಸ್ತ್ಯರು ಸಾಕ್ಷಾತ್ ಶ್ರೀರಾಮನಿಗೆ ಇದನ್ನು ಯುದ್ಧ ಭೂಮಿಯಲ್ಲಿ ಬೋಧಿಸುತ್ತಾರೆ. ನಿತ್ಯವೂ ಬೆಳಗಿನ ಜಾವ ನಾವು ಈ ಸ್ತೋತ್ರವನ್ನು ಒಮ್ಮೆ ಪಠಿಸಬಹುದು. ನಮ್ಮ ಕೆಲಸ ಆ ಸಂದರ್ಭ ಅವರು ಭಕ್ತಾದಿಗಳಿಗೆ ಕರೆ ನೀಡಿದ್ದು ಹೀಗೆ: ಎಲ್ಲರೂ ಅಗಸ್ತ್ಯ ಉಪದೇಶಿತ ಆದಿತ್ಯ ಹೃದಯವನ್ನು ನಿತ್ಯವೂ ಪಠಿಸಿ. ಇದರಿಂದ ನಿಮಗೆ ಒಳಿತಾಗುವದರೊಂದಿಗೆ ಲೋಕ ಕಲ್ಯಾಣವೂ ಆಗುತ್ತದೆ” ಎಂದಿದ್ದು ಇಲ್ಲಿ ಸ್ಮರಣೀಯ -ಲೇಖಕ.