ನಾಪೆÇೀಕ್ಲು, ಮಾ. 21: ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಟೇರಿ ಗ್ರಾಮದ ನಿಡುಮಂಡ ಕೃತಿ ಅವರು ತೋಟದಲ್ಲಿ ಬೆಳೆಸಿದ ಬೆಣ್ಣೆಹಣ್ಣು ಗಿಡಗಳಲ್ಲಿ ಕೀಟ ಬಾಧೆ ಕಂಡು ಬಂದಿದೆ.

ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ತಜ್ಞರು ಈ ಕೀಟಗಳನ್ನು ಮಿಡತೆಗಳೆಂದು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಇವುಗಳು ಏಷ್ಯಾ ಖಂಡದ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇವು ಗುಂಪು ಗುಂಪಾಗಿ ಗಿಡಗಳ ಮೇಲೆ ಧಾಳಿ ಮಾಡುತ್ತವೆ. ಇದರಿಂದ ಕೃಷಿ ಫಸಲು ಹೆಚ್ಚಾಗಿ ನಾಶವಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬೆಳೆಗಾರ ನಿಡುಮಂಡ ಕೃತಿ ಇದು ಭಯಾನಕ ಸಮಸ್ಯೆಯೇನಲ್ಲ. ಇದಕ್ಕೆ ಯಾವದಾದರೂ ಕೀಟನಾಶಕ ಸಿಂಪಡಿಸಿದರೆ ಇದನ್ನು ಕೂಡಲೇ ತಡೆಗಟ್ಟಲು ಸಾಧ್ಯ. ಈ ಬಗ್ಗೆ ಯಾರೂ ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.