*ಗೋಣಿಕೋಪ್ಪ, ಮಾ. 21: ಪೆÇೀಷಣ ಅಭಿಯಾನ ಕಾರ್ಯಕ್ರಮದಲಿ ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಸಣ್ಣ ರೇಷ್ಮೆ, ತಾರಿಕಟ್ಟೆ ಹೊಸಳ್ಳಿ, ನೆಲ್ಲಿಕಾಡು, ಭದ್ರ ಗೋಳ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಸೀಮಂತ ಮತ್ತು ಅನ್ನ ಪ್ರಸನ್ನ ಕಾರ್ಯಕ್ರಮ ನಡೆಯಿತು. ಇದರೊಂದಿಗೆ ಕೊರನೋ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಯಿತು. ತಿತಿಮತಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹೊಸಮನಿ ಹೆಚ್. ಈ .ಓ ಶಿವಯ್ಯ ,ಕರ್ಣ ಟ್ರಸ್ಟ್ ನಿರ್ದೇಶಕ ನಾಗೇಂದ್ರ, ಡಾಕ್ಟರ್ ತೋಮಸ್, ಅರ್ಜುನ, ಕಿರಿಯ ಆರೋಗ್ಯ ಕಾರ್ಯಕರ್ತೆ ಗೀತಾ, ಶಿವಮ್ಮ ಮತ್ತು ಆಶಾ ಕಾರ್ಯಕರ್ತರು ಗರ್ಭಿಣಿಯರು ಬಾಣಂತಿಯರು ಹಾಜರಿದ್ದರು.