ಮಡಿಕೇರಿ, ಮಾ.21: ದೇಶಾದ್ಯಂತ ತಾ. 22 ರಂದು ಎಲ್ಲಾ ಸಾರ್ವಜನಿಕರು ಕೊರೊನಾ ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಜನತಾ ಕಫ್ರ್ಯೂವನ್ನು ಸ್ವಇಚ್ಛೆಯಿಂದ ವಿಧಿಸಿಕೊಂಡು ತಾ. 22 ರಂದು (ಇಂದು) ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮನೆಯಲ್ಲೇ ಇರುವುದರಿಂದ ಅಂದು ನ್ಯಾಯಬೆಲೆ ಅಂಗಡಿಗಳಲ್ಲೂ ಪಡಿತರ ಚೀಟಿದಾರರು ಪಡಿತರ ಪಡೆಯಲು ಆಗಮಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಆದ ಕಾರಣ ತಾ. 22 ರಂದು ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ರಜೆಯನ್ನು ನೀಡಲಾಗಿದೆ. ಈ ದಿನದ ವಿತರಣೆಯನ್ನು ತಾ. 24 ರಂದು ನಿರ್ವಹಿಸುವಂತೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿ ವರ್ತಕರಿಗೆ ಸೂಚಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.