ಮಡಿಕೇರಿ, ಮಾ. 21: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮತ್ತು ಜವಾಹರ್ ನವೋದಯ ವಿದ್ಯಾಲಯ, ಗಾಳಿಬೀಡು ಸಂಯುಕ್ತ ಆಶ್ರಯದಲ್ಲಿ ತಾ. 29 ರಂದು ಗಾಳಿಬೀಡಿನ ನವೋದಯ ಸಭಾಂಗಣದಲ್ಲಿ ಜಿಲ್ಲೆಯ ಉದಯೋನ್ಮುಖ ಲೇಖಕರಿಗೆ ರಾಜ್ಯದ ಖ್ಯಾತ ಬರಹಗಾರರು ಮತ್ತು ಉಪನ್ಯಾಸಕರಿಂದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕೊರೊನಾ ಎಚ್ಚರಿಕೆ ಹಿನ್ನೆಲೆಯಲ್ಲಿ ಸರಕಾರ ಯಾವುದೇ ಕಾರ್ಯಕ್ರಮ ನಡೆಸಬಾರದೆಂದು ನೀಡಿರುವ ಆದೇಶದ ಅನ್ವಯ ಕಾರ್ಯಾಗಾರವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಿಗದಿಪಡಿಸಿ ಶಿಬಿರಾರ್ಥಿಗಳಿಗೆ ತಿಳಿಸಲಾಗುವುದು. ಎಂದು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪ್ರದಾನ ಕಾರ್ಯದರ್ಶಿ ವಿಲ್ಫೆರ್ಡ್ ಕ್ರಾಸ್ತ ತಿಳಿಸಿದ್ದಾರೆ.