ಇಂದು (ಮಾರ್ಚ್ 22 ರಂದು) ವಿಶ್ವ ಜಲದಿನ. ಈ ದಿನದಂದು ವಿಶ್ವದಾದ್ಯಂತ ನೀರಿನ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತದೆ.

ನೀರು ಪ್ರಕೃತಿಯ ಅಮೂಲ್ಯ ಸಂಪತ್ತು. ಪ್ರಕೃತಿ ನೀಡಿರುವ ಅಪರಿಮಿತ ಕೊಡುಗೆಗಳಲ್ಲಿ ಜಲಸಂಪನ್ಮೂಲವೂ ಒಂದು. ಇದು ಮುಗಿಯದ ಸಂಪನ್ಮೂಲ. ಮನುಷ್ಯನ ನಿತ್ಯ ಚಟುವಟಿಕೆಗಳು ಮತ್ತು ನಿರ್ವಹಣೆ ಸೇರಿದಂತೆ ಪ್ರತಿ ಜೀವಿಗೂ ನೀರು ಅವಶ್ಯಕ. ನೀರು ಪ್ರಕೃತಿಯ ಅತ್ಯಂತ ಉಪಯುಕ್ತ ಅಂಶವಾಗಿದೆ.

ನೀರು ಪ್ರತಿಯೊಂದು ಜೀವಿಯ ಅವಿಭಾಜ್ಯ ಅಂಗವಾಗಿದೆ. ಅದರ ಮೂಲಕ ಪ್ರತಿಯೊಂದು ಜೀವಿಗಳು ಬದುಕಬಲ್ಲವು. ನೀರಿಲ್ಲದೆ ಯಾವುದೇ ಜೀವಂತ ಜೀವಿಯು ಬದುಕಲು ಸಾಧ್ಯವಿಲ್ಲ. ನೀರನ್ನು ಭವಿಷ್ಯದ ಬಳಕೆಗಾಗಿ ಉಳಿಸಲು ಮತ್ತು ಸಂರಕ್ಷಿಸಲು ನೀರಿನ ಪ್ರತಿಯೊಂದು ಸಮಸ್ಯೆಯನ್ನು ನಿಭಾಯಿಸಲು ವಿಶ್ವ ಜಲದಿನವನ್ನು ಆಚರಿಸಲಾಗುತ್ತದೆ.

ಪ್ರತಿವರ್ಷ ಮಾರ್ಚ್ 21 ರಂದು ವಿಶ್ವ ಜಲದಿನವನ್ನು ಪ್ರಪಂಚಾದ್ಯಂತ ಆಚರಿಸಲಾಗುತ್ತದೆ. ಈ ಸಂದರ್ಭ‘ವಿಶ್ವ ಜಲದಿನ’ದ ಮಹತ್ವ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ.

ವಿಶ್ವಸಂಸ್ಥೆಯು ಪ್ರತಿವರ್ಷ ವಿಶ್ವ ಜಲದಿನದಂದು ನೀರಿಗೆ ಸಂರಕ್ಷಣೆಗೆ ಸಂಬಂಧಿಸಿದಂತೆ ಆ ವರ್ಷದ ಗಂಭೀರ ಸಮಸ್ಯೆಯನ್ನು ಗಮನದಲ್ಲಿ ಆಸಕ್ತಿ ತೋರಿಸಿ ಮುಖ್ಯ ಶೀರ್ಷಿಕೆ (ಥೀಮ್)ಯನ್ನು ಘೋಷಿಸುತ್ತದೆ. 2020 ರ ಈ ವರ್ಷದ ವಿಶ್ವ ಜಲದಿನಕ್ಕಾಗಿ “ಸಮಸ್ತ ನೀರು ಮತ್ತು ಹವಾಮಾನ ಬದಲಾವಣೆ” ಎಂಬ ಮುಖ್ಯ ಶೀರ್ಷಿಕೆಯ ಘೋಷಣೆಯಡಿ ನೀರಿನ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ ನೀರು, ನೈರ್ಮಲ್ಯ ಮತ್ತು ನೈರ್ಮಲ್ಯವನ್ನು ಸ್ವಚ್ಛಗೊಳಿಸುವ ಸಾರ್ವತ್ರಿಕ ಪ್ರವೇಶದ ಮೇಲೆ ಗಮನಹರಿಸಲಾಗುತ್ತದೆ. ಯುನೈಟೆಡ್ ದೇಶಗಳು ಜತೆಯಾಗಿ ಈ ದಿನದಂದು ವಿಶ್ವಮಟ್ಟದಲ್ಲಿ ವಾಟರ್ ವಲ್ರ್ಡ್ ಡೆವಲಪ್‍ಮೆಂಟ್ ರೀಪೋರ್ಟ್ (Woಡಿಟಜ Wಚಿಣeಡಿ ಆeveಟoಠಿmeಟಿಣ ಖeಠಿoಡಿಣ : WWಆಖ) ಬಿಡುಗಡೆ ಮಾಡುತ್ತದೆ. ಈ ವರದಿಯ ಆಧಾರದ ಮೇಲೆ ಆಯಾ ದೇಶಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಸರ್ಕಾರಗಳು ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುತ್ತವೆ.

ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ಭವಿಷ್ಯತ್ತಿನ ದೃಷ್ಟಿಯಿಂದ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ.

ಇಂದು ಪರಿಸರ ಮಾಲಿನ್ಯದಲ್ಲಿ ಜಲ ಮಾಲಿನ್ಯ ಕೂಡ ಯಥೇಚ್ಛವಾಗಿದೆ. ನೀರಿನ ಝರಿಗಳು, ಕೆರೆಕಟ್ಟೆಗಳು, ಬಾವಿ, ಹಳ್ಳಕೊಳ್ಳಗಳು ಹಾಗೂ ನದಿಗಳು, ಸಮುದ್ರ ಮತ್ತು ಸರೋವರಗಳು ಸೇರಿದಂತೆ ಜಲಮೂಲಗಳು ಜಲಮಾಲಿನ್ಯಕ್ಕೆ ತುತ್ತಾಗಿವೆ.

ಭೂಮಾತೆಯ ಪುಷ್ಪಮಾಲಿಕೆಯಾಗಿ ಇರಬೇಕಾದ ನದಿಗಳು ಇಂದು ಜಲಮಾಲಿನ್ಯದಿಂದ ವಿಷಧಾರೆಯಾಗಿ ಪರಿಣಮಿಸಿದೆ. ನೈಸರ್ಗಿಕವಾಗಿ ದೊರಕಬೇಕಿದ್ದ ಶುದ್ಧನೀರು ಇಂದು ಮಾರಾಟದ ವಸ್ತುವಾಗಿ ಮಾರ್ಪಟ್ಟು ಪ್ರತಿ ಲೀಟರ್‍ಗೆ ಹಾಲಿಗಿಂತಲೂ ಅಧಿಕ ಬೆಲೆಯುಳ್ಳ ಸರಕಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಭವಿಷ್ಯದಲ್ಲಿ ನೀರಿನ ಬೆಲೆ ಮಾನವನ ರಕ್ತದ ಬೆಲೆಯನ್ನೂ ಮೀರಿಸ್ಪಡುವಬಹುದಾದ ಸಂದರ್ಭ ಏರ್ಪಟ್ಟರೂ ಆಶ್ಚರ್ಯಪಡಬೇಕಾಗಿಲ್ಲ.

ಪರಿಸರದ ಅಸಮತೋಲನ, ಅರಣ್ಯ ಪ್ರದೇಶ ಕ್ಷೀಣಿಸುತ್ತಿರುವುದು, ವಾಯುಗುಣ ಹಾಗೂ ಹವಾಮಾನದ ವೈಪರೀತ್ಯ, ಮಳೆಯ ಕೊರತೆ ಹಾಗೂ ಬರಗಾಲ ಪರಿಸ್ಥಿತಿಯಿಂದಾಗಿ ನೀರಿನ ಸಮಸ್ಯೆ ತಲೆದೋರಿದೆ. ಅಂತರ್ಜಲ ಸಮಸ್ಯೆಯಿಂದಾಗಿ ನದಿಮೂಲಗಳು, ಕೆರೆಕಟ್ಟೆಗಳು, ತೆರೆದ ಬಾವಿ ಹಾಗೂ ಕೊಳವೆ ಬಾವಿಗಳು ದಿನೇ ದಿನೇ ಬತ್ತತೊಡಗಿವೆ. ಇದರಿಂದ ಕೃಷಿ ಚಟುವಟಿಕೆ ಸೇರಿದಂತೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಅಂತರ್ಜಲ ಸಂರಕ್ಷಣೆ ಬಗ್ಗೆ ನಾವು ಮುಂತಾಗ್ರತೆ ವಹಿಸದಿದ್ದಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿಗೆ ತುಂಬಾ ತತ್ವಾರ ಸಂಭವಿಸಲಿದೆ.

ನಾವು ನೀರನ್ನು ಯಥೇಚ್ಚವಾಗಿ ಖರ್ಚು ಮಾಡದೆ ಮಿತ ಬಳಕೆ ಮಾಡುವ ಮೂಲಕ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

ವಿಶ್ವ ನೀರಿನ ದಿನವು ನೀರಿನ ಸಂಬಂಧಿ ಸಮಸ್ಯೆಗಳ ಬಗ್ಗೆ ಇನ್ನಷ್ಟು ತಿಳಿದುಕೊಂಡು ಸಮಸ್ಯೆಗೆ ಸ್ಥಳೀಯವಾಗಿ ಹಾಗೂ ವಿಶ್ವಮಟ್ಟದಲ್ಲಿ ಸೂಕ್ತ ಯೋಜನೆ ರೂಪಿಸಲು ನೆರವಾಗಿದೆ.

ವಿಶ್ವ ಜಲದಿನ ಮುಖ್ಯ ಶೀರ್ಷಿಕೆಯು ಇಂದು ನಾವು ಎದುರಿಸುತ್ತಿರುವ ಜಲ ಕೊರತೆ, ಜಲ ಮಾಲಿನ್ಯ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಅಸಮರ್ಪಕ ನೀರು ಸರಬರಾಜು, ನೈರ್ಮಲ್ಯದ ಕೊರತೆ ಮತ್ತು ಹವಾಮಾನದ ಬದಲಾವಣೆಯ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ನೀರಿನ ಮೂಲಗಳು : ಸಮುದ್ರ, ಮಳೆ ನೀರು, ಅಂತರ್ಜಲ, ನದಿಗಳು ಮತ್ತು ಕೆರೆಗಳು ಆ ಐದು ನೀರಿನ ಮೂಲಗಳಾಗಿವೆ. ನೀರಿನ ಐದು ಮೂಲಗಳು ಪರಸ್ಪರ ನಿಕಟ ಸಂಬಂಧ ಹೊಂದಿವೆ. ಇತ್ತೀಚಿನ ಕೆಲವು ವರ್ಷಗಳಿಂದ ಮಳೆ ಪ್ರಮಾಣ ಕ್ಷೀಣಿಸಿರುವುದರಿಂದ ಜಲಮೂಲಗಳು ಬತ್ತಿಹೋಗಿವೆ. ಇದರಿಂದ ದಿನೇ ದಿನೇ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ನೀರಿಗೆ ಸಂಬಂಧಿಸಿದಂತೆ ಮುಂದೊಂದು ದಿನ ನೀರಿಗಾಗಿ ಮಹಾಯುದ್ಧವೇ ಸಂಭವಿಸಬಹುದು ಎಂಬುದು ಜಲತಜ್ಞರ ಅಭಿಪ್ರಾಯವಾಗಿದೆ.

ಆದ್ದರಿಂದ ನಾವು ನೀರನ್ನು ಪೋಲು ಮಾಡದೆ ಜಾಣ್ಮೆಯಿಂದ ಮಿತ ಬಳಕೆ ಮಾಡಬೇಕಿದೆ. ಅಂದರೆ ನಾವು ಪ್ರತಿಹಂತದಲ್ಲೂ ನೀರನ್ನು ಅತಿ ಎಚ್ಚರಿಕೆಯಿಂದ ಬಳಸಬೇಕು.

ಇಂದು ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಅದರಲ್ಲೂ ನಮ್ಮ ದೇಶದಲ್ಲೂ ಕೂಡ ಜನಸಂಖ್ಯೆ ಏರಿದಂತೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಗಂಭೀರವಾಗಿದೆ. ಆದರೆ ನೀರಿನ ಬಳಕೆಯ ಮೊತ್ತವೂ ಹೆಚ್ಚುತ್ತಿದೆ.

ನೀರಿನ ಗಂಭೀರ ಸಮಸ್ಯೆಗಳನ್ನು ಅವಲೋಕಿಸಿದರೆ ಭವಿಷ್ಯದಲ್ಲಿ ನೀರಿಗಾಗಿ ಮತ್ತಷ್ಟು ಸಂಘರ್ಷ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇಂದು ಏರುತ್ತಿರುವ ಜನಸಂಖ್ಯೆಯ ಬೇಡಿಕೆಗಳಿಂದ ನೀರಿನ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಈ ಕಾರಣದಿಂದ ನೀರಿನ ಸಮಸ್ಯೆ ಇಡೀ ವiನುಕುಲವನ್ನೇ ಕಾಡುತ್ತಿದೆ.

ಕೊಡಗಿನಲ್ಲಿ...

ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ತೀವ್ರ ಮಳೆಯಿಂದ ಜಲಪ್ರಳಯವೇ ಸಂಭವಿಸಿತ್ತು. ಆಗ ಕಾವೇರಿ ನದಿ ಪಾತ್ರ ಜಲಾವೃತವಾಗಿದ್ದನ್ನು ನಾವು ಕಂಡಿದ್ದೇವೆ. ಆದರೆ ಈಗಿನ ಬೇಸಿಗೆಯಲ್ಲಿ ಜಿಲ್ಲೆಯ ಹಳ್ಳ-ಕೊಳ್ಳಗಳು, ಜಲಧಾರೆಗಳು, ಕೆರೆಕಟ್ಟೆಗಳು ಬತ್ತುತ್ತಿದ್ದು, ನಾಡಿನ ಜೀವನದಿ ಕಾವೇರಿಯಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕ್ಷೀಣಿಸಿದೆ. ಹೀಗಾಗಿ ಜಿಲ್ಲೆಯ ಹಲವೆಡೆ ಈಗಾಗಲೇ ಕುಡಿಯುವ ನೀರಿಗೆ ತತ್ವಾರ ಉಂಟಾಗಿರುವುದನ್ನು ನಾವು ಮನಗಾಣಬಹುದಾಗಿದೆ.

ಅಂತರ್ಜಲಕ್ಕೆ ಪ್ರಮುಖವಾಗಿರುವ ನದಿಯಲ್ಲಿನ ಮರಳನ್ನು ಅವೈಜ್ಞಾನಿಕ ರೀತಿಯಲ್ಲಿ ತೆಗೆಯುತ್ತಿರುವುದು ಮತ್ತು ತ್ಯಾಜ್ಯಗಳು ನದಿಗೆ ಸೇರುತ್ತಿರುವುದರಿಂದ ನದಿಯ ನೀರಿನ ಪ್ರಮಾಣ ಕ್ಷೀಣಿಸಲು ಪ್ರಮುಖ ಕಾರಣವಾಗಿದೆ. ಹಾಗೆಯೇ ನದಿ ನೀರಿಗೆ ಚರಂಡಿ ನೀರು ಮತ್ತು ತ್ಯಾಜ್ಯ ವಸ್ತುಗಳು ಸೇರ್ಪಡೆಯಿಂದ ನದಿಯ ಮಾಲಿನ್ಯ ಉಂಟಾಗುತ್ತಿದೆ.

ಆದ್ದರಿಂದ ದಿನೇ ದಿನೇ ಕಲುಷಿತಗೊಳ್ಳುತ್ತಿರುವ ಜೀವನದಿ ಕಾವೇರಿ ಸೇರಿದಂತೆ ನಾಡಿನ ಎಲ್ಲಾ ನದಿಗಳ ಸಂರಕ್ಷಣೆಗೆ ಶಾಶ್ವತ ಯೋಜನೆ ರೂಪಿಸಬೇಕಿದೆ. ಕರ್ನಾಟಕದಲ್ಲಿ ನೀರಿನ ಸಂರಕ್ಷಣೆಗೆ ಸಂಬಂಧಿಸಿದಂತೆ ರೂಪಿಸಿರುವ ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕಿದೆ.

ನಾಡಿನ ಜೀವನಾಡಿಗಳಾಗಿದ್ದ ಕೆರೆಕಟ್ಟೆಗಳನ್ನು ಇಂದು ಅಭಿವೃದ್ಧಿ ಹೆಸರಿನಲ್ಲಿ ದುರ್ಬಳಕೆ ಮಾಡಲಾಗುತ್ತಿದೆ.. ಈ ಹಿಂದೆ ಶುದ್ಧ ನೀರಿನಿಂದ ತುಂಬಿ ತುಳುಕುತ್ತಿದ್ದ ಬಾವಿಗಳು ಇಂದು ಕಸದ ಗುಂಡಿಗಳಾಗಿ ಮಾರ್ಪಟ್ಟಿವೆ.

ಈ ಎಲ್ಲಾ ಅವ್ಯವಸ್ಥೆಗೆ ಮನುಷ್ಯನ ದುರಾಸೆ ಕಾರಣವಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ನಾವು ಸುಧಾರಿಸದಿದ್ದಲ್ಲಿ ಭವಿಷ್ಯದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಷ್ಟವಾಗಲಿದೆ.

ನಮ್ಮ ದೇಶದಲ್ಲಿ ಜನ ಕುಡಿಯುವ ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಿದ್ದಾರೆ. ಎಷ್ಟೋ ಕಡೆ ಅಂತರ್ಜಲ ಬತ್ತಿಹೋಗಿದೆ. ಹಾಗಾಗಿ ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಕೊಳವೆ ಬಾವಿ 1500-1800 ಅಡಿಯಷ್ಟು ಆಳಕ್ಕೆ ಇಳಿದರೂ ನೀರಿನ ಪ್ರಮಾಣ ಕ್ಷೀಣಿಸಿದೆ. ಆದ್ದರಿಂದ ನಾವು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಕೆ ಮತ್ತು ಇಸ್ರೇಲ್ ಮಾದರಿಯ ಕೃಷಿ ಮಾಡುವ ಮೂಲಕ ಕಡಿಮೆ ನೀರನ್ನು ಬಳಸಿ ಕೃಷಿ ಬೆಳೆ ಪಡೆಯಲು ಕಾರ್ಯೋನ್ಮುಖವಾಗಬೇಕಿದೆ.

ಜಗತ್ತಿನಲ್ಲಿ ಅಂದಾಜು ಒಂದು ಬಿಲಿಯನ್ ಜನ ಶುದ್ಧ ಕುಡಿಯುವ ನೀರು ಸಿಗದೆ ನರಳಾಡುವಂತಾಗಿದೆ. ಒಂದು ವೇಳೆ ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಇನ್ನೊಂದು ದಶಕದಲ್ಲಿ ಇದು ಎರಡು ಬಿಲಿಯನ್ ತಲುಪುವ ಸಾಧ್ಯತೆ ಇದೆ.

ನಾವೀಗ ಎದುರಿಸುತ್ತಿರುವ ಶುದ್ಧ ಕುಡಿಯುವ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ನೀರಿನ ಮಿತಬಳಕೆ ಹಾಗೂ ನೀರಿನ ಸಂರಕ್ಷಣೆ ಜತೆಗೆ ಮಳೆನೀರನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಇಲ್ಲದಿದ್ದಲ್ಲಿ ಭವಿಷ್ಯತ್ತಿನಲ್ಲಿ ಕುಡಿಯುವ ನೀರಿಗೆ ತುಂಬಾ ಗಂಡಾಂತರ ಪರಿಸ್ಥಿತಿ ಎದುರಿಸಬೇಕಿದೆ.

ಆದ್ದರಿಂದ ನಾವು ಈಗ ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಮನಗಂಡು ನೀರನ್ನು ಪ್ರಜ್ಞೆಯಿಂದ ಬಳಸಬೇಕು. “ಒಂದೊಂದು ಹನಿ ನೀರನ್ನೂ ನಾಳಿನ ಉತ್ತಮ ಭವಿಷ್ಯಕ್ಕಾಗಿ ಉಳಿಸಿ ಜೀವಜಲವನ್ನು ಸಂರಕ್ಷಿಸಬೇಕು. ಅಂದರೆ ನಾವು ಪ್ರತಿಹಂತದಲ್ಲೂ ನೀರನ್ನು ಅತಿ ಎಚ್ಚರಿಕೆಯಿಂದ ಬಳಸುವ ಮೂಲಕ ಈ ಅಮೂಲ್ಯ ಸಂಪತ್ತನ್ನು ಸಂರಕ್ಷಿಸಲು ನಾವು ಪಣತೊಡಬೇಕಿದೆ.”

- ಟಿ.ಜಿ. ಪ್ರೇಮಕುಮಾರ್,

ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಸೂರ್ಲಬ್ಬಿ.

(ಮೊ.ನಂ: 94485 88352)